ಶಿಗ್ಗಾವಿ: ಕಾರ್ಮಿಕರ ಕಾರ್ಡ್ ಮರುನವೀಕರಣದಲ್ಲಿನ ತಾರತಮ್ಯ ತೋರುವ ಅಧಿಕಾರಿ, ಸಿಬ್ಬಂದಿ ವಜಾಕ್ಕೆ ಆಗ್ರಹಿಸಿ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಕಾರ್ಮಿಕ ಇಲಾಖೆ ತಾಲ್ಲೂಕು ಅಧಿಕಾರಿ ಉಮೇಶ ಹುಲ್ಲಣ್ಣವರೆಗೆ ಅವರಿಗೆ ಇತ್ತೀಚಿಗೆ ಮನವಿ ಸಲ್ಲಿಸಲಾಯಿತು.

ಕಚೇರಿಯಲ್ಲಿ ಅರ್ಹ ಕಾರ್ಮಿಕರ ಕಾರ್ಡ್ ಮರುನವೀಕರಣ ಮಾಡಿಕೊಡುವಲ್ಲಿ ಸಾಕಷ್ಟು ತಾರತಮ್ಯ ಮಾಡುತ್ತಿದ್ದು, ಬಡ ಕಾರ್ಮಿಕರನ್ನು ಸತಾಯಿಸುತ್ತಿರುವ ಸಿಬ್ಬಂದಿ ವಜಾಗೊಳಿಸುವಂತೆ ಆಗ್ರಹಿಸಿ ಕರುನಾಡು ಕಟ್ಟಡ ನಿರ್ಮಾಣ ಕಾರ್ಮಿಕ ಜಾಗೃತಿ ಹಾಗೂ ಅಭಿವೃದ್ಧಿ ವೇದಿಕೆಯಿಂದ ಮನವಿ ಸಲ್ಲಿಸಿ ಆಗ್ರಹಿಸಿದರು.

ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಬಾರಂಗಿ ಮಾತನಾಡಿ, ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ನೌಕರ ರಂಗಪ್ಪ ನಿಂಬಣ್ಣವರ ಅವರು ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸದೇ ಅದರಿಂದ ಮನಬಂದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನೈಜ ಕಾರ್ಮಿಕರೆ ತೊಂದರೆ ಆಗುತ್ತಿದೆ ಎಂದರು.

ಕಾರ್ಡ್ ಗಳನ್ನು ನವೀಕರಣ ಮಾಡದೇ ಮತ್ತು ಹೊಸ ಕಾರ್ಮಿಕರ ಕಾರ್ಡ್ ಗಳಿಗೆ ಅನುಮೋದನೆ ನೀಡದೇ ಶ್ರಮಿಕ ವರ್ಗದ ಬಡವರನ್ನು ಸತಾಯಿಸುತ್ತಿದ್ದಾರೆ. ಹಲವಾರು ಕಾರ್ಮಿಕರ ನವೀಕರಣಕ್ಕೆ ಹಾಕಿದ ಕಾರ್ಡ್ ಗಳು ಜಿಲ್ಲಾ ಕಚೇರಿಯಲ್ಲಿ ಅನುಮೋದನೆ ಪಡೆದಿದ್ದರು. ನಮ್ಮ ಲಾಗಿನ್ಗೆ ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಇವರಿಂದ ಬಡ ನೈಜ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಅನ್ಯಾಯ ಆಯಾಗುತ್ತಿದ್ದು, ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಅವರನ್ನು ಕೆಲಸದಿಂದ ವಜಾಗೊಳಿಸಿ, ಬಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಕಾರ್ಮಿಕ ನಿರೀಕ್ಷಕರ ಕಚೇರಿಯ ತಾಲ್ಲೂಕು ಅಧಿಕಾರಿ ಉಮೆಶ ಹುಲ್ಲಣ್ಣನವರ ಮನವಿ ಸ್ವೀಕರಿಸಿ ಮಾತನಾಡಿ, ಕಾರ್ಮಿಕರಿಗೆ ನ್ಯಾಯ ನೀಡುವ ಕೆಲಸ ಮಾಡುತ್ತೇನೆ. ಬೇಕು, ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಪ್ರಯತ್ನ ಮಾಡುತ್ತೇವೆ. ಸರ್ಕಾರದ ಯೋಜನೆಗಳು ಅರ್ಹ ಫಲನುಭವಿಗಳಿಗೆ ತಲುಪಬೇಕು ಎಂದರು.

ಕಾರ್ಮಿಕರ ಮುಖಂಡರಾದ ಮಾಲತೇಶ ಕಂಬಾರ, ಗೋವಿಂದ ಗಣಪ್ಪನವರ, ಹನುಮಂತಪ್ಪ ವಡ್ಡರ, ಸೋಮಲಿಂಗ ಕಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.