ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಲಂಡನ್‌ನಲ್ಲಿ ನೆಲೆಸಿರುವ ಹದಿನೈದು ಜನ ಭಾರತೀಯರ ತಂಡವೊಂದು ‘ಇಂಡಿಯನ್ಸ್ ಇನ್ ಲಂಡನ್‘ ಗ್ರೂಪ್ ನೆರವಿನೊಂದಿಗೆ ‘ರೈಡ್ 2 ಬ್ರೀತ್’ ಅಭಿಯಾನದ ಮೂಲಕ ತಾಯ್ನಾಡಿನ ಕೊರೊನಾ ಸೋಂಕಿತರ ನೆರವಿಗೆ ನಿಂತಿದೆ. 123 ಕಿ.ಮೀ ಸೈಕ್ಲಿಂಗ್ ಮಾಡಿ, ಸಾಮಾಜಿಕ ಜಾಲತಾಣಗಳ ಮುಖಾಂತರ ಹಣ ಸಂಗ್ರಹ ಮಾಡಿದೆ.

ಲಂಡನ್‌ನ ಸಿಸ್ಕೊ ಕಂಪನಿಯ ವ್ಯವಸ್ಥಾಪಕ ಹಾಗೂ ‘ರೈಡ್ 2 ಬ್ರೀತ್’ ಅಭಿಯಾನದ ಸಂಚಾಲಕ, ಮೂಲತಃ ಅಹಮದಾಬಾದ್‌ನ ಜಿಗ್ನೇಶ್ ಪಟೇಲ್ ಮತ್ತು ನೊಯಿಡಾ ಮೂಲದ ಟೆಕಿ ನಿಮೀತ್ ಸಿಸೋಡಿಯಾ123 ಕಿ.ಮೀ ದಾರಿಯನ್ನು ಸೈಕ್ಲಿಂಗ್ ಮೂಲಕ ಕ್ರಮಿಸಿ ಅಲ್ಲಿನ ಭಾರತೀಯರಿಗೆ ತಮ್ಮ ಯೋಜನೆ ಬಗ್ಗೆ ತಿಳಿಸಿ, ಅವರಿಂದ ಧನ ಸಹಾಯ ಪಡೆದಿದ್ದಾರೆ. ಈ ಅಭಿಯಾನದಿಂದ ₹10 ಲಕ್ಷ ಹಣ ಸಂಗ್ರಹವಾಗಿದೆ.

‘ಇಂಡಿಯನ್ಸ್ ಇನ್ ಲಂಡನ್‘ ಗ್ರೂಪ್‌ನ ಸಂಸ್ಥಾಪಕಿ, ಸಮಾಜ ಸೇವಕಿ ಮುಂಬೈ ಮೂಲದ ಮೀನಲ್ ಜೈಸ್ವಾಲ್ ಅವರ ಸಹಾಯದಿಂದ ಭಾರತಕ್ಕೆ ಕಳುಹಿಸಿದ ತಲಾ ₹70 ಸಾವಿರ ಮೌಲ್ಯದ ಒಟ್ಟು 50 ಆಮ್ಲಜನಕ ಸಾಂದ್ರಕಗಳನ್ನು ಗುಜರಾತ್, ರಾಜಸ್ತಾನ, ಪಂಜಾಬ್, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಿಗೆ ಸಾಂದ್ರಕಗಳನ್ನು ಪೂರೈಸಲಾಗಿದೆ.

‘ರೈಡ್ 2 ಬ್ರೀತ್’ ಅಭಿಯಾನದಲ್ಲಿ ಪಾಲ್ಗೊಂಡಿದ್ದ ರಟ್ಟಿಹಳ್ಳಿ ಮೂಲದ ಲಂಡನ್‌ನಲ್ಲಿ ಎಂಎಸ್ ಓದುತ್ತಿರುವ ಎಂಜಿನಿಯರ್ ಮಧುಕರ ಕುಲಕರ್ಣಿ ಇಲ್ಲಿನ ಎನ್‌ಜಿಒಗೆ ಈ ಮಾಹಿತಿ ನೀಡಿದ್ದರು.

ರಟ್ಟೀಹಳ್ಳಿಯಲ್ಲಿರುವ ವಿಕಾಸ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸುಶೀಲ್ ನಾಡಗೇರ ಅವರು ಬೆಂಗಳೂರಿನಲ್ಲಿ 3, ಗದಗ ಸಮೀಪದ ಬಿಂಚಲಿಯಲ್ಲಿ 1, ಹಾವೇರಿಯ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ 2 ಆಮ್ಲಜನಕ ಸಾಂದ್ರಕಗಳನ್ನು ವಿತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.