ಪ್ರಜಾವಾಣಿ ವಾರ್ತೆ

ಹಾವೇರಿ: ‘ವಚನ ಸಾಹಿತ್ಯದ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಪಾತ್ರ ಬಹಳ ಮುಖ್ಯವಾಗಿದೆ’ ಎಂದು ಹಾವೇರಿ ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಹೇಳಿದರು.

ನಗರದ ಬಸವ ಬಳಗರಿಂದ ಭಾನುವಾರ ಹಮ್ಮಿಕೊಂಡಿದ್ದ ‘ಮಡಿವಾಳ ಮಾಚಿದೇವರ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿರುವ ವಚನ ಸಾಹಿತ್ಯ ಸರ್ವಕಾಲಕ್ಕೂ, ಸರ್ವ ಪ್ರದೇಶಕ್ಕೂ ಸಲ್ಲುವ ಅಮೋಘ ಸಾಹಿತ್ಯವಾಗಿದೆ. ಮಾಚಿದೇವರು ಗಣಾಚಾರಿ ಶರಣಾಗಿದ್ದು, ಬಸವಣ್ಣನವರೆಂದರೆ ಅನನ್ಯವಾದ ಭಕ್ತಿ ಮತ್ತು ಪ್ರೀತಿ ಹೊಂದಿದ್ದರು. ಬಸವಣ್ಣನವರಿಗೂ ಮಾಚಿದೇವರ ಬಗ್ಗೆ ಅಪಾರವಾದ ಗೌರವ ಹಾಗೂ ಒಲವು ಇದ್ದುದರಿಂದ ಗೌರವ ಪೂರ್ವಕವಾಗಿ ಅವರನ್ನು ಮಾಚಿತಂದೆ ಎಂಬುದಾಗಿ ಕರೆಯುತ್ತಿದ್ದರು’ ಎಂದು ಹೇಳಿದರು.

ಬಳಗದ ಕಾರ್ಯದರ್ಶಿ ಜಗದೀಶ ಹತ್ತಿ ಕೋಟಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ, ಶಿವಬಸಪ್ಪ ಮುದ್ದಿ ಅವರು, ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಹಾಗೂ ಅವರ ವಚನಗಳ ವಿಶ್ಲೇಷಣೆ ಮಾಡಿದರು. ಮಡಿವಾಳ ಸಮಾಜದ ಹಾವೇರಿ ಜಿಲ್ಲಾ ಘಟಕ ಅಧ್ಯಕ್ಷ ದೇವರಾಜ ಮಡಿವಾಳರ, ತಾಲ್ಲೂಕು ಘಟಕ ಅಧ್ಯಕ್ಷ ವೀರಣ್ಣ ಮಡಿವಾಳರ, ನಾಗರಾಜ ಮಡಿವಾಳರ ಅವರನ್ನು ಬಳಗದಿಂದ ಸನ್ಮಾನಿಸಲಾಯಿತು.

ಮುರಿಗೆಪ್ಪ ಕಡೇಕೊಪ್ಪ, ಶಿವಾನಂದ ಹೊಸಮನಿ ನಾಗೇಂದ್ರಪ್ಪ ಮಂಡಕ್ಕಿ, ಮಾಲತೇಶ ಕರೆಮಣ್ಣನವರ, ಗಂಗಣ್ಣ ಮಾಸೂರ, ಕೊಟ್ರೇಶ ಬಿಜಾಪುರ, ಶಿವಯೋಗಿ ಬೆನ್ನೂರ, ಹನುಮಂತಪ್ಪ ಮಡಿವಾಳ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.