ಶನಿವಾರ, ಜನವರಿ 28, 2023
18 °C
ಹಾವೇರಿ ಸಮ್ಮೇಳನಕ್ಕೆ ನೋಂದಣಿ ಇಲ್ಲದೆ ಬರುವ ಸರಕಾರಿ ಸಿಬ್ಬಂದಿಗಳಿಗೆ ಹಿರಿಯ ಅಧಿಕಾರಿಗಳ ಪ್ರಮಾಣ ಪತ್ರವಿದ್ದರೆ ಓಓಡಿ ಸೌಲಭ್ಯ

ಹಾವೇರಿ ಸಮ್ಮೇಳನಕ್ಕೆ ಬರುವ ಸರಕಾರಿ ಸಿಬ್ಬಂದಿಗೆ ಓಓಡಿ ಸೌಲಭ್ಯ: ಮಹೇಶ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಅಂತಿಮ ಹಂತದಲ್ಲಿ ಇದ್ದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾಡಳಿತದ ಜೊತೆಗೂಡಿ ಅದ್ಭುತವಾಗಿ ಸಿದ್ದತೆ ಮಾಡುತ್ತಿದೆ. ಈ ಬಾರಿಯ ಸಮ್ಮೇಳನದಲ್ಲಿ ಸಾಕಷ್ಟು ಸರಳೀಕೃತ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೆ ನಾಡಿನ ಮೂಲೆ ಮೂಲೆಯಿಂದ ಕನ್ನಡಿಗರು ಸಮ್ಮೇಳನಕ್ಕೆ ಆಗಮಿಸುತ್ತಿದ್ದು ಎಲ್ಲ ಕನ್ನಡಿಗರು ಹುಮ್ಮಸದ ಉತ್ಸಾಹವನ್ನು ತೋರುತ್ತಿದ್ದಾರೆ. ಈಗಾಗಲೇ ಪದಾಧಿಕಾರಿಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸಮ್ಮೇಳನ ನಡೆಯುವ ಸಮಯದಲ್ಲಿಯೂ ಯಾವುದೇ ನೋಂದಣಿಗೆ ಅವಕಾಶ ಇರುವುದಿಲ್ಲ ಎಂದು ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ.

ಸರಕಾರಿ ನೌಕರರು ಸಮ್ಮೇಳನಕ್ಕೆ ಭಾಗವಹಿಸುವವರು ಅವರ ಕಚೇರಿಯ ಹಿರಿಯ ಅಧಿಕಾರಿಗಳಿಂದ ಅಧಿಕೃತ ಪತ್ರ ತಂದು ತಮ್ಮ ಪರಿಚಯ ಪತ್ರವನ್ನು ಸಮಮ್ಮೇಳನ ನಡೆಯುವ ಸ್ಥಳದಲ್ಲಿ ಇರುವ ಸ್ವಾಗತ ಕಚೇರಿಯಲ್ಲಿ ಇರುವ ಸಿಬ್ಬಂದಿಗಳಿಗೆ ತೋರಿಸಿದ ಸರಕಾರಿ ಸಿಬ್ಬಂದಿಗಳಿಗೆ  'ಅನ್ಯಕಾರ್ಯ ನಿಮಿತ್ತ' ( ಓ.ಓ.ಡಿ) ಪ್ರಮಾಣ ಪತ್ರವನ್ನು ನೀಡಲಾಗುವುದು.

ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗಿದ್ದು ಇದರ ಲಾಭವನ್ನು ಸರಕಾರಿ ಸಿಬ್ಬಂದಿಗಳು ಪಡೆದುಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತು ಕೋರಿಕೊಂಡಿದೆ.

ಖಾಸಗಿ ಸಂಸ್ಥಗಳಲ್ಲಿ, ಕಾರ್ಖಾನೆಗಳು ಸೇರಿದಂತೆ ಇತರ ಕಡೆಗಲ್ಲಿ ಕೆಲಸ ಮಾಡುವ ಕನ್ನಡಿಗರು, ಭಾಷಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ವಿಶೇಷ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಭಾಗವಸಲು ಇಷ್ಟಪಟ್ಟಲ್ಲಿ ಅಂಥವರಿಗೆ ವೇತನ ಸಹಿತ ರಜಾ ನೀಡಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಈ ಕುರಿತು ಕಾರ್ಮಿಕ ಇಲಾಖೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ ಅವರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮನವಿ ಮಾಡಿಕೊಂಡಿತ್ತು. ನಾಡಿನ ಎಲ್ಲಾ ಖಾಸಗಿ ಕಾರ್ಖಾನೆ, ಸಂಘ ಸಂಸ್ಥೆಗಳು, ಕೇಂದ್ರದ ಸಾಮ್ಯದಲ್ಲಿ ಇರುವ ಕಾರ್ಖಾನೆಗಳು, ಸಿಬ್ಬಂದಿ ಸಮ್ಮೇಳನದಲ್ಲಿ ಭಾಗವಹಿಸಬೇಕು.

ಅಂಥವರಿಗೆ ಅವಕಾಶ ಕಲ್ಪಿಸಲು ಹಿನ್ನೆಲೆಯಲ್ಲಿ ವೇತನ ಸಹಿತ ರಜಾ ಘೋಷಣೆ ಮಾಡುವಂತೆ ಆದೇಶ ಮಾಡಿಕೊಂಡಿತ್ತು. ಪರಿಷತ್ತಿನ ಮನವಿಯನ್ನು ಮನ್ನಿಸಿದ ಕಾರ್ಮಿಕ ಇಲಾಖೆ ಕನ್ನಡದ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವವರಿಗೆ ವೇತನ ಸಹಿತ ರಜಾ ನೀಡುವಂತೆ ಆದೇಶ ಹೊರಡಿಸಿ ಕನ್ನಡಾಭಿಮಾನವನ್ನು ತೋರಿಸಿದ್ದಾರೆ ಎಂದು ಮಹೇಶ ಜೋಶಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು