ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣರ ಸಮಸ್ಯೆಗೆ ಶಾಸಕರ ಸ್ಪಂದನೆ

Published 8 ನವೆಂಬರ್ 2023, 13:02 IST
Last Updated 8 ನವೆಂಬರ್ 2023, 13:02 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ ಅವರು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.

ತಾಲ್ಲೂಕಿನ ಶಿರಗೋಡ, ಶಾಡಗುಪ್ಪಿ, ಹಾವಣಗಿ, ಮನೋಹರ ನಗರ, ಅರಳೇಶ್ವರ, ಬಾಳಂಬೀಡ, ಬೆಳಗಾಲಪೇಟೆ, ಕಲಕೇರಿ ಸೇರಿ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರ ಕುಂದು ಕೊರತೆಗಳನ್ನು
ಆಲಿಸಿದರು.

ಸ್ಥಳೀಯ ಹಂತದಲ್ಲಿನ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ, ರಸ್ತೆ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಿತ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

‘ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಆದಷ್ಟು ಸ್ಥಳೀಯ ಹಂತದ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರಕಿಸಲು ಆದ್ಯತೆ ನೀಡಲಾಗಿದೆ.
24/7 ಸಹಾಯವಾಣಿಯ ಮೂಲಕ ಜನರ ದೂರುಗಳಿಗೆ ಸ್ಪಂದಿಸಲಾಗುತ್ತಿದೆ. ವ್ಯವಸ್ಥಿತ ಕಚೇರಿ ತೆರೆದು ಉತ್ತಮ ಆಡಳಿತಕ್ಕೆ ವಿಶೇಷ ಗಮನ ನೀಡಲಾಗಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಸ್ಥಳೀಯ ಪ್ರಮುಖರಾದ ಪ್ರಕಾಶ್ ಬಣಕಾರ, ಬಶೀರ್‌ಅಹ್ಮದ್ ನಾಲಬಂದ್‌, ಮಹ್ಮದ್ಇಕ್ಬಾಲ್‌ಸಾಬ್ ಮುಲ್ಲಾ, ರಾಜಶೇಖರ್ ಮಲಗುಂದ, ಪ್ರಕಾಶ ಓಲೇಕಾರ್, ಜಗದೀಶ್ ಬಡಿಗೇರ, ಮಾಲತೇಶ ವಾಲಿಕಾರ, ನಾಗಯ್ಯ ಹಿರೇಮಠ, ರಾಜು ಬಾರ್ಕಿ, ಸಂತೋಷ್ ದುಂಡಣ್ಣನವರ, ಕೊಟ್ರೇಶ್ ಅಂಗಡಿ, ಶಿವಶಂಕರಯ್ಶಾ ಹಿರೇಮಠ, ಪ್ರಶಾಂತ ಕಾಡಪ್ಪನವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT