ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಹಿನ್ನೆಲೆಯ ‘ರಟ್ಟೀಹಳ್ಳಿ’

Last Updated 8 ಡಿಸೆಂಬರ್ 2018, 16:54 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಕುಮದ್ವತಿ ನದಿ ತಟದಲ್ಲಿರುವ ರಟ್ಟೀಹಳ್ಳಿ ಗ್ರಾಮವು ಈಗ ತಾಲ್ಲೂಕ ಕೇಂದ್ರ. ಇದು ಶಾತವಾಹನ, ಕದಂಬ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳರು ಸೇರಿದಂತೆ ಇನ್ನೂ ಅನೇಕ ರಾಜರ ಆಡಳಿತಕ್ಕೆ ಒಳಪಟ್ಟಿತ್ತು.

ಕ್ರಿ.ಶ. 1174ರ ಕಣವಿಸಿದ್ದಗೇರಿ ಶಾಸನದ ಪ್ರಕಾರ ನೂರಂಬಾಡದ ಕದಂಬರ ಆಡಳಿತ ಕೇಂದ್ರ ಎಂದು ಗುರುತಿಸಲ್ಪಟ್ಟಿದೆ. ಗ್ರಾಮದಲ್ಲಿ 10 ಶಾಸನಗಳು, 8 ವೀರಗಲ್ಲು, 6 ಮಹಾಸತಿ ಕಲ್ಲುಗಳಿದ್ದು, ಅವು ಗ್ರಾಮದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಈ ಎಲ್ಲಾ ಶಾಸನ, ವೀರಗಲ್ಲುಗಳು ಕದಂಬರ, ಕಳಚೂರಿ ಅರಸರು, ಯಾದವರು, ವಿಜಯನಗರ ಅರಸರು, ಹೊಯ್ಸಳರ ಕಾಲದವುಗಳಾಗಿವೆ ಎಂಬ ಉಲ್ಲೇಖಗಳಿವೆ.

ರಟ್ಟೀಹಳ್ಳಿ-ಆನವಟ್ಟಿ ಯುದ್ಧ: ಮೈಸೂರಿನ ಹೈದರಾಲಿ ತನ್ನ ಸೇನಾಪತಿ ಫಜಲುಲ್ಲಾನ ಮೂಲಕ ರಟ್ಟೀಹಳ್ಳಿಯನ್ನು ಆಕ್ರಮಿಸಲು ಪ್ರಯತ್ನಿಸಿದಾಗ ಪೇಶ್ವೆ ಮನೆತನದಮಾಧವ ರಾಯಅವನನ್ನು ಪರಾಭವಗೊಳಿಸಿ ಗ್ರಾಮವನ್ನು ಹಿಡಿತದಲ್ಲಿಟ್ಟುಕೊಂಡಿದ್ದನು.

ಕದಂಬೇಶ್ವರ, ವೀರಭದ್ರೇಶ್ವರ, ಮಳೆಮಲ್ಲೇಶ್ವರ, ಹೊಳೆದಂಡಿ ಈಶ್ವರ, ಬಸವಣ್ಣ, ಪಾಂಡುರಂಗ, ಆಂಜನೇಯ, ಕೇಶವ ದೇವಾಲಯ, ಕಾಳಮ್ಮನ ಗುಡಿ, ಒಕ್ಕಲಗೇರಿ ಮಾರೆಮ್ಮ, ಹೊಳೆಸಾಲ ದುರ್ಗಮ್ಮ, ಬಂಟೇಶ್ವರ, ಕೊಲ್ಲಾಪುರ ಮಹಾಲಕ್ಷ್ಮಿ, ಬೀರೇಶ್ವರ, ತುಳಜಾ ಭವಾನಿ, ಕೆರೆ ತೂಬಿನ ಚೌಡವ್ವ, ಬೇಡರ ಕಣ್ಣಪ್ಪ, ವಿಠೋಭ ಮಂದಿರ, ಜೈನ ಮೂರ್ತಿಗಳ, ಮುಂಡೇಶಾವಲಿ ದರ್ಗಾ, ಮದಗದ ಕೆಂಚಮ್ಮ.ಕಬ್ಬಿಣಕಂಥಿಮಠ, ಚಂದ್ರಿಗುಡಿ ಮಠ, ವಿರಕ್ತ ಮಠ, ಭಾವಾನ ಮಠ, ಗುರು ಪ್ರೇಮನಂದಗಿರಿ ಮಠಗಳು ಇಲ್ಲಿವೆ.

ಸಿನಿಮಾ ರಂಗದ ಆರ್.ಎನ್.ನಾಗೇಂದ್ರರಾವ್, ಆರ್.ಎನ್.ಸುದರ್ಶನ, ಆರ.ಎನ್.ಜಯಗೋಪಾಲ ಇಲ್ಲಿನವರು. ಇಲ್ಲಿ ಕೊಕ್ಕೊ ಪಟುಗಳು, ಜಾನಪದ ಕಲಾವಿದರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT