ಹಿರೇಕೆರೂರ(ಹಂಸಭಾವಿ): ಪಟ್ಟಣದ ಹೊರವಲಯದ ದುರ್ಗಾದೇವಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕೃಷಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಬಾಗಿನ ಅರ್ಪಿಸಿದರು.

ಸಚಿವ ಬಿ.ಸಿ. ಪಾಟೀಲ ಮಾತನಾಡಿ, ‘ಈ ಭಾಗದ ರೈತರ ಜೀವನಾಡಿಯಾಗಿರುವ ಹಾಗೂ ಹತ್ತಾರು ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಿಸುವ ಐತಿಹಾಸಿಕ ದುರ್ಗಾದೇವಿ ಕೆರೆ ತುಂಬಿರುವುದು ಖುಷಿ ತಂದಿದೆ. ತಾಲ್ಲೂಕಿನ ಸುಮಾರು 60 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಅಚ್ಚುಕಟ್ಟು ಭಾಗದಲ್ಲಿ ರೈತರು ವಾರ್ಷಿಕ ಎರಡು ಬೆಳೆಗಳನ್ನು ಪಡೆಯಲು ಅನುಕೂಲವಾಗುತ್ತದೆ’ ಎಂದರು.

ಯು.ಬಿ. ಬಣಕಾರ ಮಾತನಾಡಿ, ‘ದುರ್ಗಾದೇವಿ ಕೆರೆ ತುಂಬಿದರೆ ಸುತ್ತಲಿನ ಗ್ರಾಮಗಳ ರೈತರ ಬದುಕು ಹಸನಾಗುತ್ತದೆ’ ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಂಠಾಧರ ಅಂಗಡಿ, ಜಗದೀಶ ತಂಬಾಕದ, ಉಪಾಧ್ಯಕ್ಷೆ ಕುಸುಮ ಬಣಕಾರ, ಸದಸ್ಯರಾದ ಹರೀಶ ಕಲಾಲ, ವಿಜಯಾಶ್ರೀ ಬಂಗೇರ, ಹನುಮಂತಪ್ಪ ಕುರುಬರ, ಸುಧಾ ಚಿಂದಿ, ರಜಿಯಾ ಬೇಗಂ ಅತದಿ, ರವಿಶಂಕರ ಬಾಳೀಕಾಯಿ, ಅಲ್ತಾಫ್‌ಖಾನ ಪಠಾಣ, ರಮೇಶ ಕೋಡಿಹಳ್ಳಿ, ಬಸವರಾಜ ಕಟ್ಟಿಮನಿ, ಸತೀಶ ಕೊರಿಗೌಡ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.