ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನದಿಗೆ ಕಲುಷಿತ ನೀರು: ಕಂಪನಿ ವಿರುದ್ದ ಕ್ರಮಕ್ಕೆ ಮಾಜಿ ಶಾಸಕ ಪೂಜಾರ ಒತ್ತಾಯ

Published 18 ಮೇ 2024, 15:29 IST
Last Updated 18 ಮೇ 2024, 15:29 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಹನುಮನಹಳ್ಳಿ ಹಾಗೂ ತೆರದಹಳ್ಳಿ ಬಳಿಯಿರುವ ಗೋಲ್ಡನ್ ಹ್ಯಾಚರೀಸ್‌ನ ಗ್ರೀನ್ ಎನರ್ಜಿ ಬಯೋ ರಿಫೈನ್‌ರೈಜ್ ಕಂಪನಿಯ ಪೆಟ್ರೋಲಿಯಂ ಉತ್ಪನ್ನಗಳು ಹೊರಸೂಸುವ ರಾಸಾಯನಿಕ ಕಲ್ಮಶಯುಕ್ತ ನೀರು ಸಮೀಪದ ಹಳ್ಳದಿಂದ ಕುಮಧ್ವತಿ ನದಿಗೆ ಹರಿದು ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗುತ್ತಿದೆ. ಶುಕ್ರವಾರ ಹನುಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ಸಮಸ್ಯೆ ಪರಿಶೀಲಿಸಿದರು.

ನಂತರ ರೈತರ ಜೊತೆಗೆ ಕೆಲಕಾಲ ಚರ್ಚಿಸಿ ರೈತರಿಗೆ ಆಗುವ ತೊಂದರೆಗಳನ್ನು ಆಲಿಸಿದರು.

ನಂತರ ಹಾವೇರಿ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

‘ಕಂಪನಿಯ ಕಾಲುವೆ ಮುಖಾಂತರ ಕುಮದ್ವತಿ ನದಿಗೆ ವಿಷಪೂರಿತ ನೀರನ್ನು ಹರಿಸಿದ್ದು, ಅದು ಮುಂದೆ ಕುಮಧ್ವತಿ ನದಿ ಮೂಲಕ ತಾಲ್ಲೂಕಿನ ಜೀವನದಿ ತುಂಗಭದ್ರಾ ನದಿಗೆ ಸೇರುತ್ತದೆ. ಮುಂದೆ ರಾಣೆಬೆನ್ನೂರ ಹಾಗೂ ಬ್ಯಾಡಗಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಜಾಗದಲ್ಲಿ ತಲುಪಲಿದೆ. ಇದರಿಂದ ಪಟ್ಟಣದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಂಪನಿಯವರು ಜನರ ಜೀವನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ. ಕೂಡಲೇ ಕಂಪನಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು’ ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ, ಶೇಷಗಿರಿ ಹಾಗೂ ಸುತ್ತಮುತ್ತಲಿನ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT