ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಪರಿವರ್ತಕ ಕಳ್ಳತನ: ಇಬ್ಬರ ಬಂಧನ

Last Updated 3 ಸೆಪ್ಟೆಂಬರ್ 2022, 4:37 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ತಾಲ್ಲೂಕಿನ ಬೈರಂಪಾದ ಗ್ರಾಮದ ಬಳಿ ಆಂಜನೇಯ ದೇವಸ್ಥಾನದ ಮುಖ್ಯರಸ್ತೆಯಲ್ಲಿಅಳವಡಿಸಿದ್ದ₹4 ಲಕ್ಷ ಮೌಲ್ಯದ ವಿದ್ಯುತ್ ಪರಿವರ್ತಕವನ್ನು ಆ.28ರಂದು ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ರಿಯಾಜ್ ಅಹ್ಮದ್ ಶಬ್ಬೀರಸಾಬ್ ಮುಲ್ಲಾ ಮತ್ತು ರಾಜು ಮರಡೆಪ್ಪ ಕೊಟಗಿಮನಿ ಬಂಧಿತ ಆರೋಪಿಗಳು. ಕಳ್ಳತನಕ್ಕೆ ಬಳಸಲಾಗಿದ್ದ ಲಾರಿಯನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

1992ರಲ್ಲಿ ಸಣ್ಣ ನೀರಾವರಿ ಇಲಾಖೆಯವರು ಅಳವಡಿಸಿದ್ದ ವಿದ್ಯುತ್ ಪರಿವರ್ತಕ ಕಳ್ಳತನವಾದ ಬಗ್ಗೆ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಪಿಐ ಆರ್.ಆರ್. ಪಾಟೀಲ ನೇತೃತ್ವದಲ್ಲಿ ಪಿಎಸ್ಐ ಕೃಷ್ಣಪ್ಪ ತೋಪಿನ, ಪಿ.ಎಫ್. ನೀರೊಳ್ಳಿ, ಎಎಸ್ಐ ಎಂ.ಟಿ. ಕರಿಯಣ್ಣವರ, ಸಿಬ್ಬಂದಿ ಎಸ್.ಎಂ. ಅಂಗಡಿ, ಬಿ.ಬಿ. ಕೊಕ್ಕರಗುಂದಿ, ಎಫ್.ಎನ್. ಕುಂದೂರು, ಟಿ.ಬಿ. ಪೂಜಾರ, ಪಿ.ಎನ್. ಹೊಸಳ್ಳಿ, ಮಾಲತೇಶ ನ್ಯಾಮತಿ, ರಮೇಶ ಬಡಿಗೇರ, ರಘು ಕದರಮಂಡಲಗಿ ತಂಡವು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT