ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ: ಗುತ್ತಲದ ರುಕ್ಮಿಣಿ ರಾಜ್ಯಕ್ಕೆ 3 ನೇ ರ‍್ಯಾಂಕ್

Last Updated 13 ಸೆಪ್ಟೆಂಬರ್ 2020, 16:33 IST
ಅಕ್ಷರ ಗಾತ್ರ

ಗುತ್ತಲ (ಹಾವೇರಿ ಜಿಲ್ಲೆ): ಪಟ್ಟಣದ ಎ.ರುಕ್ಮಿಣಿ ಅವರು ಪಿಎಸ್‌ಐ ಹುದ್ದೆ ನೇಮಕಾತಿಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌ ಪಡೆದಿದ್ದಾರೆ.

ಅವರು ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದಲ್ಲಿ ಪೂರ್ಣಗೊಳಿಸಿದ್ದರು. ವಿವಾಹದ ಬಳಿಕ ಪದವಿ ಶಿಕ್ಷಣವನ್ನು ಹಾವೇರಿ ಹುಕ್ಕೇರಿಮಠದ ಮಹಿಳಾ ಕಾಲೇಜಿನಲ್ಲಿ ‍ಪಡೆದರು. ಇಬ್ಬರು ಪುತ್ರಿಯರು ಜನಿಸಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರು.

ಅವರು ಡಾ.ಡಿ.ಡಿ.ಮೋಟೆಬೆನ್ನೂರ ಪ್ರೌಢಶಾಲೆಯ ಸಹಶಿಕ್ಷಕ ಜಿ.ಹನುಮಂತಪ್ಪ ಅವರ ಪತ್ನಿ.

‘ಪ್ರಜಾವಾಣಿ’ಯೊಂದಿಗೆ ತಮ್ಮ ಸಂತೋಷ ಹಂಚಿಕೊಂಡ ರುಕ್ಷ್ಮಿಣಿ, ‘ಬೆಂಗಳೂರಿನ ಆದಿಚುಂಚನಗಿರಿ ಮಠದ ವಸತಿ ನಿಲಯದಲ್ಲಿ ಉಳಿದುಕೊಂಡು ಜೆಐಸಿಇ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಪರೀಕ್ಷೆಗಾಗಿ ಒಂದೂವರೆ ವರ್ಷ ತರಬೇತಿ ಪಡೆದೆ. ಮೂರನೇ ರ‍್ಯಾಂಕ್‌ ಪಡೆದಿರುವುದು ಖುಷಿ ನೀಡಿದೆ. ನಿರಂತರ ಓದಿನಿಂದ ಈ ಸಾಧನೆ ಸಾಧ್ಯವಾಗಿದೆ. ಈ ಮೊದಲು ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ್ದೆ. ಈ ಸಮಯದಲ್ಲಿ ಪತಿ ನೀಡಿದ ಸಹಕಾರ ಬಹಳ. ಇಬ್ಬರು ಪುಟ್ಟ ಮಕ್ಕಳನ್ನು ಅವರ ಬಳಿಯೇ ಬಿಟ್ಟು ಹೋಗಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT