ಬುಧವಾರ, ಆಗಸ್ಟ್ 4, 2021
26 °C

ಪಿಯು ಫಲಿತಾಂಶ | ಏಲಕ್ಕಿ ಕಂಪಿನ ಜಿಲ್ಲೆಗೆ 14ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ‘ಏಲಕ್ಕಿ ಕಂಪಿನ ನಾಡು’ ಎಂದೇ ಹೆಸರಾದ ಜಿಲ್ಲೆಗೆ 14ನೇ ಸ್ಥಾನ ಸಿಕ್ಕಿದೆ. ಹಿಂದಿನ ವರ್ಷ ಜಿಲ್ಲೆಗೆ 16ನೇ ಸ್ಥಾನ ಸಿಕ್ಕಿದ್ದು, ಈ ಬಾರಿ ಎರಡು ಸ್ಥಾನ ಮೇಲೇರಿದೆ. 

ಈ ಬಾರಿ 12,179 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 8,283 ವಿದ್ಯಾರ್ಥಿಗಳು ಉರ್ತೀರ್ಣರಾಗಿದ್ದು, ಜಿಲ್ಲೆಗೆ ಶೇ 68.01 ಫಲಿತಾಂಶ ದೊರಕಿದೆ. ಕಲಾ ವಿಭಾಗದಲ್ಲಿ ಶೇ 57.7, ವಾಣಿಜ್ಯ ವಿಭಾಗದಲ್ಲಿ ಶೇ 77.34 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 76 ಫಲಿತಾಂಶ ಸಿಕ್ಕಿದೆ. 

ನಗರ ಪ್ರದೇಶದ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಶೇ 67.04 ಫಲಿತಾಂಶ ಪಡೆದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ 69.66 ಫಲಿತಾಂಶ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಿರಂಜನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು