ರಟ್ಟೀಹಳ್ಳಿ: ಪಟ್ಟಣ ಪಂಚಾಯ್ತಿ ಚುನಾವಣೆಗೆ ಸೋಮವಾರ ಒಂದೇ ದಿನ 40 ಜನ ನಾಮಪತ್ರ ಸಲ್ಲಿಸಿದರು. ಪ್ರಮುಖ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಿಂದ 12 ಜನ, ಕಾಂಗ್ರೆಸ್ನಿಂದ 13 ಜನ, ಪಕ್ಷೇತರರು 15 ಜನ ಸೇರಿ ಒಟ್ಟು 40 ಜನ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಇದುವರೆಗೆ ನಾಮಪತ್ರ ಸಲ್ಲಿಸಿದವರ ಸಂಖ್ಯೆ 41ಕ್ಕೆ ತಲುಪಿದೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾಗಿದೆ. ಆ.17ಕ್ಕೆ ಚುನಾವಣೆ ನಡೆಯಲಿದೆ.

ಬಿಜೆಪಿ ಪಕ್ಷದ ಕಚೇರಿಯಿಂದ ಬೆಳಿಗ್ಗೆ ಮೆರವಣಿಗೆ ಮೂಲಕ ಶಿವಾಜಿ ನಗರ, ಹಳೇಬಸ್ ನಿಲ್ದಾಣ ವೃತ್ತ, ಮಹಾಲಕ್ಷ್ಮೀ ವೃತ್ತ, ಭಗತಸಿಂಗ್ ವೃತ್ತದ ಮೂಲಕ ಹಾದು ಚುನಾವಣಾ ಕಚೇರಿಗೆ ಆಗಮಿಸಿದ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ವೇಳೆ ಮೆರವಣಿಗೆಯಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ, ತಾಲ್ಲೂಕು ಅಧ್ಯಕ್ಷ ದೇವರಾಜ ನಾಗಣ್ಣನವರ, ಮುಖಂಡರಾದ ಎನ್.ಎಂ. ಈಟೇರ, ಗವಿಸಿದ್ದಪ್ಪ ದ್ಯಾವಣ್ಣನವರ, ಆರ್.ಎನ್. ಗಂಗೋಳ, ಶಂಭಣ್ಣ ಗೂಳಪ್ಪನವರ, ಲಿಂಗರಾಜ ಚಪ್ಪರದಹಳ್ಳಿ, ಗಣೇಶ ವೇರ್ಣೇಕರ, ಹನುಮಂತಪ್ಪ ಗಾಜೇರ, ಪರಮೇಶಪ್ಪ ಹಲಗೇರಿ, ಸೇರಿದಂತೆ ಹಲವು ಪ್ರಮುಖರು, ಕಾರ್ಯಕರ್ತರು, ಬಿಜೆಪಿ ಅಖಾಡದಲ್ಲಿರುವ ಹುರಿಯಾಳುಗಳು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.