ಗುರುವಾರ , ಅಕ್ಟೋಬರ್ 22, 2020
26 °C

ಹಾವೇರಿ: ಕಾರ್ಮಿಕ ಕಾರ್ಡ್‌ ವಿತರಣೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕಾರ್ಮಿಕ ಕಾರ್ಡುಗಳನ್ನು ಮಾಡಲು ಅರ್ಜಿ ಹಾಕಿ 6 ತಿಂಗಳುಗಳೇ ಕಳೆದರೂ ಈವರೆಗೂ ಕಾರ್ಡುಗಳನ್ನು ಪೂರೈಸಿಲ್ಲ. ಅಲ್ಲದೆ ಸೇವಾಸಿಂಧು ನಿಂತುಹೋಗಿ ಎರಡು ತಿಂಗಳುಗಳೇ ಕಳೆದಿವೆ. ಇದರಿಂದ ವಿವಿಧ ಸೌಕರ್ಯಗಳಿಗಾಗಿ ಅರ್ಜಿ ಹಾಕುವುದು ಸಮಸ್ಯೆಯಾಗಿದೆ ಎಂದು ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘಗಳು ಜಂಟಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. 

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಿಗೆ ಪಾಸ್ ಕೊಟ್ಟಂತೆ ಎಲ್ಲೆಡೆಯಲ್ಲಿಯೂ ಕೂಡ ಉಚಿತ ಬಸ್ ಪಾಸ್ ಕೊಡಬೇಕು. ಕಾರ್ಮಿಕ ಚಿಕಿತ್ಸಾ ಭಾಗ್ಯವನ್ನು ಕಾರ್ಮಿಕನ ಕುಟುಂಬದ ಎಲ್ಲ ಸದಸ್ಯರಿಗೆ ವಿಸ್ತರಿಸಬೇಕು. ಪಿಂಚಣಿ ಯೋಜನೆಗೆ, ಮದುವೆ ಸಹಾಯಧನಕ್ಕೆ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕೆಂಬ ಕಾಲಮಿತಿಯನ್ನು ತೆಗೆದುಹಾಕಬೇಕು. ಗೃಹ ಭಾಗ್ಯ ಯೋಜನೆಯ ಷರತ್ತುಗಳನ್ನು ಎಲ್ಲಾ ಅರ್ಹ ಕಾರ್ಮಿಕರಿಗೆ ಸಿಗುವಂತೆ ಸರಳೀಕರಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. 

ಎಲ್ಲ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ 5000/ರೂ ಎಲ್ಲರಿಗೂ ದೊರೆತಿಲ್ಲ. ಏಜೆಂಟರ ಹಾವಳಿ ಮತ್ತು ಶೋಷಣೆಯನ್ನು ತಪ್ಪಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. 

ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಯ ಗಂಗಾಧರ್ ಬಡಿಗೇರ, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ನಾಯಕರಾದ ರಾಜು ಆಲದಹಳ್ಳಿ, ದಾದಾಪೀರ್ ತಿಳವಳ್ಳಿ, ಚಂದ್ರಶೇಖರ್ ಕಜ್ಜೇರ್, ನಾಗರಾಜ್ ಮದ್ಲೂರ್ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು