ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಗೃಹದಲ್ಲಿ ‘ಸೋಂಕು ನಿವಾರಣಾ ಘಟಕ’ ಕಾರ್ಯಾರಂಭ

ಕೈದಿಗಳು ಮತ್ತು ಸಿಬ್ಬಂದಿ ಸುರಕ್ಷತೆಗೆ ಒತ್ತು: ತಿಮ್ಮಣ್ಣ ಭಜಂತ್ರಿ
Last Updated 6 ಜುಲೈ 2020, 11:54 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ತಾಲ್ಲೂಕಿನ ಕೆರೆಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ‘ಸೋಂಕು ನಿವಾರಣಾ ಘಟಕ’ (ಸ್ಯಾನಿಟೈಸೇಶನ್‌ ಬೂತ್‌) ತೆರೆಯಲಾಗಿದೆ.

131 ಕೈದಿಗಳು ಮತ್ತು 26 ಸಿಬ್ಬಂದಿಗಳ ಸುರಕ್ಷತಾ ದೃಷ್ಟಿಯಿಂದ ₹89 ಸಾವಿರ ವೆಚ್ಚದಲ್ಲಿ ಸೋಂಕು ನಿವಾರಣಾ ಘಟಕ, ಉಪಕರಣ ಮತ್ತು ದ್ರಾವಣಗಳನ್ನು ತರಿಸಿದ್ದೇವೆ. ಜಿಲ್ಲಾ ಕಾರಾಗೃಹಗಳಲ್ಲೇ ಪ್ರಥಮವಾಗಿ ಹಾವೇರಿ ಕಾರಾಗೃಹದಲ್ಲಿ ಈ ಘಟಕ ಆರಂಭಿಸಲಾಗಿದೆ. ಬಯೋ ಆರ್ಗ್ಯಾನಿಕ್‌ ದ್ರಾವಣವನ್ನು (ಆಲ್ಕೋಹಾಲ್‌ ರಹಿತ) ಬಳಸುತ್ತಿರುವುದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ತಿಮ್ಮಣ್ಣ ಭೀ.ಭಜಂತ್ರಿ ತಿಳಿಸಿದರು.

‘ಪಲ್ಸ್‌ ಆಕ್ಸಿಮೀಟರ್‌’, ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ ಗನ್‌ಗಳನ್ನು ತರಿಸಿದ್ದೇವೆ. ನಿತ್ಯ ಕೈದಿಗಳ ಆರೋಗ್ಯ ತಪಾಸಣೆ, ಸ್ಯಾನಿಟೈಸರ್ ಮತ್ತು ಮಾಸ್ಕ್‌ ಬಳಕೆಗೆ ಆದ್ಯತೆ ನೀಡಿದ್ದೇವೆ. ಸೋಂಕು ನಿವಾರಣಾ ದ್ರಾವಣದಿಂದ ಕೊಠಡಿ, ಕಿಟಕಿ, ಬಾಗಿಲುಗಳನ್ನು ಸ್ವಚ್ಛಗೊಳಿಸುತ್ತೇವೆ. ಕಾರಾಗೃಹಕ್ಕೆ ಬರುವ ಅತಿಥಿಗಳನ್ನು ತಪಾಸಣೆ ಮಾಡಿದ ನಂತರವೇ ಒಳಕ್ಕೆ ಬಿಡುತ್ತೇವೆ ಎಂದು ಮಾಹಿತಿ ನೀಡಿದರು.

30 ಸಾವಿರ ಮಾಸ್ಕ್‌ ತಯಾರಿಕೆ:

ಕಾರಾಗೃಹದ 12 ಕೈದಿಗಳು ಮಾರ್ಚ್‌ನಿಂದ ಇಲ್ಲಿಯವರೆಗೆ ಸುಮಾರು 30 ಸಾವಿರ ಮಾಸ್ಕ್‌ಗಳನ್ನು ತಯಾರಿಸಿದ್ದಾರೆ. ಅಂಚೆ ಕಚೇರಿ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂಜಿ.ಎಚ್‌.ಕಾಲೇಜು, ಸಾಯಿ ಸೇವಾ ಸಂಸ್ಥೆಗಳಿಂದ ಆರ್ಡರ್‌ಗಳನ್ನು ಪಡೆದುತಲಾ ಮಾಸ್ಕ್‌ಗೆ ₹6ರ ದರದಲ್ಲಿ ಪೂರೈಕೆ ಮಾಡಿದ್ದೇವೆ. ಕೈದಿಗಳಿಗೆ ಪ್ರತಿ ಮಾಸ್ಕ್‌ ತಯಾರಿಕೆಗೆ ₹1 ಕೂಲಿ ನೀಡಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT