ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕರ್ಮ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಕೊಡಿ: ಶಂಕರಾನಂದ ಸರಸ್ವತಿ ಸ್ವಾಮೀಜಿ

Published : 18 ಸೆಪ್ಟೆಂಬರ್ 2024, 16:14 IST
Last Updated : 18 ಸೆಪ್ಟೆಂಬರ್ 2024, 16:14 IST
ಫಾಲೋ ಮಾಡಿ
Comments

ಕುಮಾರಪಟ್ಟಣ: ವಿಶ್ವಕರ್ಮ ಸಮುದಾಯದವರು ಕಾಯಕ ತತ್ವ ನಂಬಿ ಬದುಕುತ್ತಿದ್ದಾರೆ. ಪಂಚ ಕಸುಬಿನಿಂದ ವಿಶ್ವಕರ್ಮ ಸಮುದಾಯ ಎಲ್ಲರೊಂದಿಗೆ ಬೆರೆತಿದೆ. ಇಂತಹ ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ನೀಡಲು ಸರ್ಕಾರ ಮುಂದಾಗಬೇಕು ಎಂದು ವಡ್ಡನಹಾಳ ವಿಶ್ವಕರ್ಮ ಮಹಾಸಂಸ್ಥಾನ ಪೀಠದ ಶಂಕರಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲ್ಲೂಕು ವಿಶ್ವಕರ್ಮ ಸಮಾಜ, ವಿಶ್ವಕರ್ಮ ಮಹಾಮಂಡಳ ಮತ್ತು ಕಾಳಿಕಾದೇವಿ ಟ್ರಸ್ಟ್ ಕಮಿಟಿ ರಾಣೆಬೆನ್ನೂರು ಹಾಗೂ ಐರಣಿ ಗ್ರಾಮದ ಸಮಾಜ ಬಂಧುಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಭಗವಾನ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಐರಣಿ ಗ್ರಾಮದಲ್ಲಿ ತಾಲ್ಲೂಕುಮಟ್ಟದ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆ ತಂದಿದೆ. ವಿಶ್ವಕರ್ಮ ಸಮುದಾಯದ ಹೆಸರಿನಲ್ಲಿ ಅನೇಕರು ರಾಜ್ಯಾಧ್ಯಕ್ಷರುಗಳಿದ್ದಾರೆ, ಅದು ಸರಿ ಅಲ್ಲ. ಒಬ್ಬರೇ ರಾಜ್ಯಾಧ್ಯಕ್ಷರಾದಲ್ಲಿ ಸಮಾಜದ ಸಂಘಟನೆಗೆ ತುಂಬಾ ಸಹಕಾರಿಯಾಗುತ್ತದೆ.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ದೇಶದ ಬೆನ್ನೆಲುಬು ರೈತ, ರೈತರ ಬೆನ್ನೆಲುಬು ವಿಶ್ವಕರ್ಮಿಗಳು. ಅತ್ಯಂತ ಸಣ್ಣ ಸಮಾಜದವರಾದ ವಿಶ್ವಕರ್ಮಿಗಳು ಸಂಘಟಿತರಾಗಬೇಕು. ಸಂವಿಧಾನ ಬದ್ಧವಾಗಿ, ನ್ಯಾಯ ಸಮ್ಮತವಾಗಿ ಅವರಿಗೆ ಸಿಗಬೇಕಾಗಿರುವ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಮುಂದಾಗಿದ್ದು, ತಮ್ಮ ಸೌಲಭ್ಯಗಳಿಗಾಗಿ ಸಂಘಟಿತರಾಗುವುದರ ಜೊತೆಗೆ ರಾಜಕೀಯವಾಗಿಯೂ ಸ್ಥಾನಮಾನವನ್ನು ಪಡೆಯಲು ಮುಂದಾಗಬೇಕು ಎಂದರು.

ಪಿ.ಎಂ.ವಿಶ್ವಕರ್ಮ ಯೋಜನೆಯ ತರಬೇತಿ ಕೇಂದ್ರವನ್ನು ನಗರದ ಪದವಿ ಕಾಲೇಜಿನಲ್ಲಿ ಸದ್ಯದಲ್ಲಿಯೇ ಪ್ರಾರಂಭಿಸಲಾಗುತ್ತದೆ. ಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ವಿಶ್ವಕರ್ಮ ಸಮಾಜದ ಒಬ್ಬರಿಗೆ ಸ್ಥಾನ ನೀಡುವುದಾಗಿ ಭರವಸೆ ನೀಡಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಸಹ ಚುನಾವಣೆಯಲ್ಲಿ ವಿಶ್ವಕರ್ಮಿಯರಿಗೆ ಟಿಕೇಟ್ ನೀಡುವುದಾಗಿ ಭರವಸೆ ನೀಡಿದರು.

ರಾಜ್ಯ ಪ್ರದೇಶ ಕಾಂಗ್ರೆಸ್ ಕುಶಲಕರ್ಮಿ ವಿಭಾಗದ ಅಧ್ಯಕ್ಷ ಆರ್.ಪ್ರಸನ್ನಕುಮಾರ, ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಕನ್ನಡ ಸೋಮು, ವಡ್ಡನಹಾಳ್ ಮಠದ ಅಧ್ಯಕ್ಷ ಮಹೇಂದ್ರಾಚಾರಿ ಮಾತನಾಡಿದರು.

ಜ್ಯೋಯಿಸರಹರಳಹಳ್ಳಿ ಗ್ರಾಮದ ವಿದ್ಯಾರ್ಥಿನಿ ಕುಸುಮಾ ಗೋಪಾಲ ಬಡಿಗೇರ ಭರತ ನಾಟ್ಯ ಪ್ರದರ್ಶನ ಸರ್ವರ ಮನಸೂರೆಗೊಂಡಿತು.

ಐರಣಿ ಮನಿಮಠದ ಗಜದಂಡ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಹಾವೇರಿ ಭಗವಾನ್ ವಿಶ್ವಕರ್ಮ ಕಮಿಟಿ ಅಧ್ಯಕ್ಷ ಮಂಜುನಾಥ ಈ ಬಡಿಗೇರ, ರಾಣೆಬೆನ್ನೂರು ತಾಲ್ಲೂಕು ಘಟಕದ ಅಧ್ಯಕ್ಷ ಗಿರೀಶ ಕಮ್ಮಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕಿಲಾರದ, ತಾಲ್ಲೂಕು ವಿಶ್ವಕರ್ಮ ಮಹಾಮಂಡಳದ ಅಧ್ಯಕ್ಷ ಮೌನೇಶ ಕಮ್ಮಾರ, ಐರಣಿ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿಯ ನೀಲಾಚಾರಿ ಗುಡ್ಡಾಚಾರಿ ಕಮ್ಮಾರ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜಪ್ಪ ಹೊನ್ನಾಳಿ, ಮಾಲತೇಶಚಾರಿ ಬಡಗೇರ, ಶತಾಯುಷಿ ಬಸಮ್ಮ ಫಕ್ಕಿರಪ್ಪ ಪ್ಯಾಟೀಮನಿ, ಕೊಟ್ರೇಶ್ ನಡುವಿನಮನಿ, ಸೈನಿಕರಾದ ಬಸವರಾಜ ಎಡಿಕಾಲ, ಪರಶುರಾಮ ಕಟಗಿ, ದಾನಪ್ಪ ಲಗುಬಿಗಿ, ಹರೀಶ್ ಬರದೂರು, ಶಂಕರಾಚಾರಿ ಕಮ್ಮಾರ, ಮಾಲತೇಶ, ಗಂಗಾಧರಪ್ಪ ಇದ್ದರು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ತರಬೇತಿ ಕೇಂದ್ರಗಳು ರಾಜ್ಯದಾದ್ಯಂತ ಪ್ರಾರಂಭಗೊಂಡಿದೆ. ರಾಣೆಬೆನ್ನೂರಿನಲ್ಲಿ ಶಾಸಕರು ತಕ್ಷಣವೇ ಪ್ರಾರಂಭಿಸಬೇಕು
–ಶಂಕರಾನಂದ ಸರಸ್ವತಿ ಸ್ವಾಮೀಜಿ ವಡ್ಡನಹಾಳ ವಿಶ್ವಕರ್ಮ ಮಹಾಸಂಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT