ಪ್ರಜಾವಾಣಿ ವಾರ್ತೆ

ಸವಣೂರು: ಶಾಲಾ ಬಸ್ ಚಾಲನೆ ವೇಳೆ ಎದೆ ನೋವು ಕಾಣಿಸಿಕೊಂಡು ಚಾಲಕ ಫಕ್ಕೀರೇಶ ಉಮೇಶ ಮಲ್ಲೇಶಣ್ಣನವರ (25) ಎಂಬುವರು ಬಸ್ನಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಹೊಸಳ್ಳಿ–ಕಳಲಕೊಂಡ ಮಾರ್ಗದಲ್ಲಿ ಬುಧವಾರ ನಡೆದಿದೆ.

ಹೊಸಳ್ಳಿ ಗ್ರಾಮದ ನಿವಾಸಿ ಫಕ್ಕೀರೇಶ, ಸವಣೂರಿನ ಐ.ಎಸ್.ಮರೋಳ ಆಂಗ್ಲ ಮಾಧ್ಯಮ ಶಾಲೆಯ ಬಸ್ ಚಾಲಕ. ಬುಧವಾರ ಶಾಲಾ ಅವಧಿ ಮುಗಿದ ಬಳಿಕ ಮಕ್ಕಳನ್ನು ಮನೆಗೆ ಬಿಡಲು ಹೊರಟಾಗ ಈ ಅವಘಡ ಸಂಭವಿಸಿದೆ. ಶಾಲಾ ಬಸ್ನಲ್ಲಿ 18 ಮಕ್ಕಳು ಇದ್ದರು.

‘ಹುರಳಿಕುಪ್ಪಿ, ತೊಂಡೂರು, ಹೊಸಳ್ಳಿ, ತಳ್ಳಳ್ಳಿ ಮಾರ್ಗವಾಗಿ ಕಳಲಕೊಂಡ ಗ್ರಾಮಕ್ಕೆ ಬಸ್ ಹೊರಟಿತ್ತು. ಚಾಲನೆ ಸಂದರ್ಭದಲ್ಲಿ ಚಾಲಕನಿಗೆ ಎದೆನೋವು ಕಾಣಿಸಿದೆ. ರಸ್ತೆ ಪಕ್ಕದಲ್ಲಿ ಬಸ್ ನಿಲ್ಲಿಸಿದ ಚಾಲಕ, ಮಕ್ಕಳಿಂದ ನೀರು ಪಡೆದು ಕುಡಿದಿದ್ದರು. ಸೀಟಿನಲ್ಲೇ ಮಲಗಿದ್ದು ಕಂಡು ಮಕ್ಕಳು ಗಾಬರಿಯಿಂದ ಕೂಗಾಡಿದರು. ಅದನ್ನು ಕೇಳಿಸಿಕೊಂಡ ಸ್ಥಳೀಯರು ಬಸ್ನೊಳಗೆ ಹೋಗಿ ನೋಡಿದಾಗ, ಸ್ಥಳದಲ್ಲೇ ಫಕ್ಕೀರೇಶ ಮೃತಪಟ್ಟಿರುವುದು ಗೊತ್ತಾಗಿದೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ಶಾಲೆಯಿಂದ ಹೊರಟ ಸಂದರ್ಭದಲ್ಲಿ 45ಕ್ಕೂ ಹೆಚ್ಚು ಮಕ್ಕಳು ಬಸ್ನಲ್ಲಿದ್ದರು. ಕೆಲ ಮಕ್ಕಳನ್ನು ಮಾರ್ಗಮಧ್ಯೆ ಗ್ರಾಮಗಳಲ್ಲಿ ಇಳಿಸಲಾಗಿತ್ತು. 18 ಮಕ್ಕಳು ಬಸ್ನಲ್ಲಿ ಉಳಿದಿದ್ದರು. ಎದೆನೋವು ಕಾಣಿಸಿಸುತ್ತಿದ್ದಂತೆ ಫಕ್ಕೀರೇಶ, ರಸ್ತೆ ಪಕ್ಕ ಬಸ್ ನಿಲ್ಲಿಸಿದ್ದರು. ಆಕಸ್ಮಾತ ಚಾಲನೆ ಮಾಡಿದ್ದರೆ, ಅನಾಹುತ ಸಂಭವಿಸಿ ಮಕ್ಕಳ ಜೀವಕ್ಕೂ ಕುತ್ತು ಉಂಟಾಗುವ ಸಂಭವವಿತ್ತು. ಮಕ್ಕಳನ್ನು ಉಳಿಸಿ, ಚಾಲಕ ಮೃತಪಟ್ಟಿದ್ದಾರೆ’ ಎಂದು ಹೇಳಿದರು.

ಮೂರು ದಿನಗಳ ಹಿಂದೆಯಷ್ಟೇ ಫಕ್ಕೀರೇಶ ಅವರು ತಮ್ಮ ಜನ್ಮದಿನ ಆಚರಿಸಿದ್ದರು. ಅವರ ಸಾವಿನ ಸಂಬಂಧ ಸವಣೂರ ಪೋಲಿಸರು ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.