ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ

Published 6 ಜನವರಿ 2024, 16:23 IST
Last Updated 6 ಜನವರಿ 2024, 16:23 IST
ಅಕ್ಷರ ಗಾತ್ರ

ರಾಣೆಬೆನ್ನೂರು: ವಿಜ್ಞಾನ ಕೇವಲ ವಸ್ತು ಪ್ರದರ್ಶನವಲ್ಲ ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಬೆಳೆಸುವ ಒಂದು ಮಾರ್ಗ. ವಿಜ್ಞಾನದ ಹೊರೆತು ಯಾವುದು ಇಲ್ಲ. ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ವೈಜ್ಞಾನಿಕ ಚಿಂತೆನ ಹೊಂದುವುದರ ಮೂಲಕ ಮೂಢನಂಬಿಕೆ ಹೊಗಲಾಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ ಹೇಳಿದರು.

ನಗರದ ಕೆ.ಎಲ್.ಇ.ಸಂಸ್ಥೆಯ ರಾಜರಾಜೇಶ್ವರಿ ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಪಿ.ಲಿಂಗನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಟ್ಟು 36 ಮಾದರಿಗಳು ಪ್ರದರ್ಶನಗೊಂಡವು. ವಿವಿಧ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು.

ಜೈನ್ ಪಬ್ಲಿಕ್ ಶಾಲೆ (ಪ್ರಥಮ), ಎಜು ಏಷ್ಯಿಯಾ ಶಾಲೆ ಕರೂರು (ದ್ವಿತೀಯ) ಮತ್ತು ನಿಟ್ಟೂರು ಗ್ರಾಮದ ಬಿ.ಎ.ಜೆ.ಎಸ್.ಎಸ್. ಶಾಲೆ (ತೃತೀಯ) ಸ್ಥಾನ ಪಡೆದುಕೊಂಡರು. ಆಡಳಿತ ಮಂಡಳಿಯ ಬಿ.ಎಸ್.ಪಟ್ಟಣಶೆಟ್ಟಿ, ವೀರೇಶ ಅಂಗಡಿ, ಪ್ರಾಚಾರ್ಯ ಡಾ.ಎನ್.ಪಿ.ಮಾಗನೂರು, ಆರ್.ಜಿ.ಕುರವತ್ತಿ, ರಜನಿ ಲಿಂಗನಗೌಡ್ರ, ಎಸ್.ಆರ್.ಘಟ್ಟಿರೆಡ್ಡಿಹಾಳ, ಎಂ.ಎಸ್‌.ಕೋರಿಶೆಟ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT