ತಡಸ: ಭೂತಾಯಿಯ ಮಡಿಲಿನಲ್ಲಿ ರೈತರೆಲ್ಲರೂ ಸೀಗೆ ಹುಣ್ಣಿಮೆಯ ದಿನ ಸಂಭ್ರಮಿಸುತ್ತಾರೆ. ರೈತರು ವರ್ಷದಲ್ಲಿ ತಮ್ಮ ಬೆಳೆಗಳಿಗೆ ಅರ್ಪಿಸುವ ಕೊನೆಯ ಪೂಜೆ ಇದಾಗಿದೆ.

ಸಿಗಿ ಹುಣ್ಣಿಮೆಯ ದಿನ ರೈತರು ಹಲವು ಬಗೆಯ ಅಡುಗೆಯನ್ನು ಮಾಡಿ ಹೊಲದಲ್ಲಿ ಬೆಳೆದ ಬೆಳೆಗೆ ಚರಗ ಚೆಲ್ಲುತ್ತಾರೆ. ಈ ಮೂಲಕ ಭೂತಾಯಿಯ ಸೀಮಂತ ಕಾರ್ಯ ನಡೆಸುತ್ತಾರೆ.

ರೈತರು ಹೊಲದಲ್ಲಿ ಐದು ಕಲ್ಲುಗಳನ್ನು, ಸುಣ್ಣ ಮತ್ತು ಕೆಂಪು ಮಣ್ಣನ್ನು ಬಳಿದು ಪಂಚಪಾಂಡವರ ಮೂರ್ತಿ ಎಂದು ಪ್ರತಿಷ್ಠಾಪಿಸುತ್ತಾರೆ. ಅವುಗಳಿಗೆ ಪೂಜೆ ಮಾಡುವುದು ಈ ಹುಣ್ಣಿಮೆಯ ಒಂದು ವಿಶೇಷವಾಗಿದೆ ಎಂದು ಗ್ರಾಮದ ಕಲ್ಲಪ್ಪ ಬೀರೋಳಿ ಹೇಳುತ್ತಾರೆ.

ಸಹ ಕುಟುಂಬ ಭೋಜನ: ರೈತರೆಲ್ಲರೂ ಬಗೆ ಬಗೆಯ ಅಡುಗೆ ತಯಾರಿಸಿಕೊಂಡು ಹೊಲದ ಸುತ್ತಲಿರುವ ದೇವತೆಗಳಿಗೆ ಪೂಜೆ ಅರ್ಪಿಸುತ್ತಾರೆ. ನಂತರ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೂಲಕ ತಮ್ಮ ಸಂಬಂಧಿಕರು ಹಾಗೂ ಸಹ ಕುಟುಂಬ ಸಮೇತ ಹೊಲಕ್ಕೆ ತೆರಳಿ, ಅಲ್ಲಿಯೇ ಕುಳಿತು ಊಟ ಮಾಡುತ್ತಾರೆ.

ಬಿದಿರು ಬುಟ್ಟಿಗೆ ಸಿಂಗಾರ ಮಾಡಿ ಕೆಂಪು ಮಣ್ಣು ಹಾಗೂ ಸುಣ್ಣದ ಚುಕ್ಕೆ ಇಟ್ಟು ಅದರಲ್ಲಿ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಇಟ್ಟು ತೆರಳುವುದು ಈ ಹಬ್ಬದ ವಿಶೇಷವಾಗಿದೆ ಎಂದು ಲಕ್ಷ್ಮವ್ವ ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.