ಗುರುವಾರ , ಏಪ್ರಿಲ್ 15, 2021
20 °C

ಸಕಲ ಮಾನವರು ಸಮಾನರು: ಹೊಸಮಠದ ಬಸವಶಾಂತಲಿಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಹೊಸಮಠದಲ್ಲಿ ಶರಣ ಸಂಗಮ ಹಾಗೂ ಮಹಾಶಿವ ಶರಣ ಸಮಗಾರ ಹರಳಯ್ಯನವರ ಸ್ಮರಣೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. 

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದ ಕಲ್ಯಾಣ ಕ್ರಾಂತಿಯ ಅಮೂಲ್ಯ ರತ್ನ ಶಿವಶರಣ ಸಮಗಾರ ಹರಳಯ್ಯ. ಅನುಭವ ಮಂಟಪದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೂಂಡ ಮಹಾನುಭಾವಿಗಳು. ಜಾತಿ ಎಂಬುದು ಹುಟ್ಟಿನಿಂದ ಬಂದಿಲ್ಲ. ಉಪ ಜೀವನಕ್ಕಾಗಿ ಕೈಗೊಂಡ ಕಾಯಕವು ಜಾತಿಯಲ್ಲ. ಹುಟ್ಟಿನಿಂದ ಸಕಲ
ಮಾನವ ಕುಲ ಸಮಾನ ಎಂದು ಸಾರಿದ ಶರಣರ ಬದುಕು ನಮಗೆ ದಾರಿದೀಪ’ ಎಂದರು. 

ಡಾ.ಪುಷ್ಪ ಶಲವಾಡಿಮಠ ಉಪನ್ಯಾಸ ನೀಡಿದರು. ಚಂದ್ರಶೇಖರ ಶಿಶುನಳ್ಳಿ ಹಾವೇರಿ, ಮುರಿಗೆಪ್ಪ ಕಡೆಕೊಪ್ಪ ಹಾವೇರಿ, ಹರಳಯ್ಯ ಸಮಾಜದ ಯಲ್ಲಪ್ಪ ಬೆಟ್ಟಗೇರಿ ಇದ್ದರು. ಅಕ್ಕನ ಬಳಗದ ಮಹಿಳೆಯರಿಂದ ಪ್ರಾರ್ಥನೆ ನೆರೆವೇರಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು