‘ಅಂಗವಿಕಲರ ಮಾಸಾಶನ ತಿಂಗಳಿಗೆ ₹1400 ಮಾತ್ರ ಇದ್ದು ಹೊರ ರಾಜ್ಯಗಳಲ್ಲಿ ನೀಡುವಂತೆ ₹3 ಸಾವಿರ ಮಾಸಾಶನ ನೀಡಬೇಕು. ಬಸ್ ಸೌಲಭ್ಯ ರಾಜ್ಯವ್ಯಾಪ್ತಿ ನೀಡಬೇಕು. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ 37 ಸಾವಿರ ಅಂಗವಿಕಲರಿದ್ದು ಅರ್ಹರಿಗೆ ನ್ಯಾಯ ನೀಡಬೇಕು’ ಎಂದು ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ ಹೇಳಿದರು.