ಶಿಗ್ಗಾವಿ ಪಟ್ಟಣದಲ್ಲಿರುವ ಜಿ+1 ಮನೆ ಬಳಿಯ ಚರಂಡಿ ದುಸ್ಥಿತಿ
ರುದ್ರಪ್ಪ ಗೌರಾಪುರ
ಕಟ್ಟಡದ ಮೇಲಿನ ಮನೆಯ ಶೌಚಾಲಯಗಳಿಂದ ಕೆಳಗಿನ ಮನೆಗೆ ನೀರು ಸೋರುತ್ತಿದ್ದು ದುರ್ವಾಸನೆ ಬೀರುತ್ತಿದೆ. ಮನೆಯಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ನೀರು ಸೋರುವ ವಿಚಾರವಾಗಿ ಜಗಳವೂ ಆಗುತ್ತಿದೆ. ಈ ಸಮಸ್ಯೆ ಬೇಗನೇ ಪರಿಹರಿಸಿ
ರುದ್ರಪ್ಪ ಗೌರಾಪುರ ಜಿ+1 ಮನೆ ನಿವಾಸಿ
ಶಿವಾನಂದ ಹರಿಗೊಂಡ
ಹಲವು ವರ್ಷಗಳ ಹೋರಾಟದಿಂದ ಮನೆಗಳು ಸಿಕ್ಕಿವೆ. ಈಗ ಮೂಲ ಸೌಕರ್ಯವಿಲ್ಲದೇ ಕಾಡಿನ ಜನರಂತೆ ವಾಸಿಸುತ್ತಿದ್ದೇವೆ. ಕೂಡಲೇ ಮೂಲ ಸೌಕರ್ಯ ನೀಡಿ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು
ಶಿವಾನಂದ ಹರಿಗೊಂಡ ಜಿ+1 ಮನೆ ನಿವಾಸಿ
ಜಿ+1 ಮನೆಗಳಿಗೆ ತಿಂಗಳ ಒಳಗಾಗಿ ಕುಡಿಯುವ ನೀರು ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಶೌಚಾಲಯ ಸಮಸ್ಯೆಯನ್ನು ಸರಿಪಡಿಸಲಾಗುವುದು
ಮಲ್ಲೇಶಪ್ಪ ಆರ್. ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿ
‘ಪ್ರತಿಭಟನೆ ನಡೆಸಿದ್ದ ನಿವಾಸಿಗಳು’
‘ಜಿ+1 ಮನೆಗಳಲ್ಲಿ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿ ಪುರಸಭೆ ಎದುರು ನಿವಾಸಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನಗರ ಸಮಿತಿ ಹಾಗೂ ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.
‘ಹೋರಾಟದ ಫಲವಾಗಿ ಜೂನ್ ತಿಂಗಳಿನಲ್ಲಿ ಶಾಸಕರ ನೇತೃತ್ವದಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ನಿರ್ಮಿತಿ ಕೇಂದ್ರದವರು ಹಾಗೂ ಪುರಸಭೆ ಅಧಿಕಾರಿಗಳು, ಇಂದಿಗೂ ಮೂಲ ಸೌಕರ್ಯ ಕಲ್ಪಿಸಿಲ್ಲ’ ಎಂದು ನಿವಾಸಿಗಳು ದೂರಿದ್ದರು. ಮೂಲ ಸೌಕರ್ಯ ಕಲ್ಪಿಸದಿದ್ದರೂ ಗಂಭೀರ ಸ್ವರೂಪದ ಹೋರಾಟ ನಡೆಸುವುದಾಗಿಯೂ ಘೋಷಿಸಿದ್ದಾರೆ.