ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಬೆಳವಣೆಗೆಗೆ ಕ್ರೀಡೆ ಅವಶ್ಯ’

Published 2 ಆಗಸ್ಟ್ 2023, 16:22 IST
Last Updated 2 ಆಗಸ್ಟ್ 2023, 16:22 IST
ಅಕ್ಷರ ಗಾತ್ರ

ಬ್ಯಾಡಗಿ: ಕ್ರೀಡೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣೆಗೆಗೆ ಸಹಕಾರಿಯಾಗಿದ್ದು, ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಹಿರೇಅಣಜಿ ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಆರೋಗ್ಯದ ಜೊತೆಗೆ ನೈತಿಕತೆ ಬೆಳಸಿಕೊಳ್ಳಬೇಕಾಗಿದೆ. ಕ್ರೀಡಾ ಚಟುವಟಿಕೆಗಳು ಕ್ರೀಡಾಕೂಟಕ್ಕೆ ಮಾತ್ರ ಸೀಮಿತವಾಗಬಾರದು. ಅವು ನಿರಂತರವಾಗಿ ನಡೆಯಬೇಕೆಂದು ಹೇಳಿದರು.

ಈ ವೇಳೆ ಗ್ರಾಮದ ಮುಖಂಡರಾದ ಶಿವಪ್ಪ ಕೋಡದ, ಹೊನ್ನಪ್ಪ ಪುಟ್ಟಣ್ಣನವರ, ಶಿವಪುತ್ರಪ್ಪ ಜಿಗಳಿಕೊಪ್ಪ, ರಾಘವೇಂದ್ರ ಗಿಡ್ಡೇರ, ಬಸನಗೌಡ ದಾನೆಗೊಂಡರ, ಅಬ್ದುಲ್‌ಮುನಾಫ್‌ ಎಲಿಗಾರ, ಗ್ರಾಮ ಪಂಚಾಯ್ತಿ ಸದಸ್ಯರಾದ ರೇಖಾ ಜಿಗಳಿಕೊಪ್ಪ, ಕುಸುಮಾ ಗಿಡ್ಡೇರ, ಸುಮಿತ್ರಾ ಹಡಪದ, ಭೋಜಯ್ಯ ಹಿರೇಮಠ, ರೇಣುಕಾ ಈಳಗೇರ, ಮುಖ್ಯ ಶಿಕ್ಷಕ ಹುಚ್ಚಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT