ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಗ್ರಾಮ ಆರೋಗ್ಯ ಸೇವಾ ಕೇಂದ್ರ ಸ್ಥಾಪನೆಗೆ ಕ್ರಮ

ಕೋವಿಡ್‌: 6,022 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾರ್ಯಪಡೆ ರಚನೆ
Last Updated 16 ಸೆಪ್ಟೆಂಬರ್ 2020, 19:10 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು 6,022 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ‘ಗ್ರಾಮ ಆರೋಗ್ಯ ಸೇವಾ ಕೇಂದ್ರ’ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಗ್ರಾಮ ಮತ್ತು ಗ್ರಾಮ ಪಂಚಾಯಿತಿ ಈ ಎರಡೂ ಹಂತಗಳಲ್ಲಿ ‘ಕಾರ್ಯಪಡೆ’ಗಳನ್ನು ರಚಿಸಿ, ಹಳ್ಳಿಗಳಲ್ಲಿ ಸೋಂಕು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಪಂಚಾಯತ್‌ರಾಜ್‌ ಆಯುಕ್ತಾಲಯ, ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ವೈದ್ಯಕೀಯ ಪರಿಕರ: ಪಲ್ಸ್‌ ಆಕ್ಸಿ ಮೀಟರ್‌, ಸಕ್ಕರೆಯ ಪ್ರಮಾಣ ಪರೀಕ್ಷಿಸುವ ಯಂತ್ರ (ಗ್ಲುಕೋ ಮೀಟರ್‌), ಬಿ.ಪಿ. ಮಾನಿಟರ್‌, ಥರ್ಮಲ್‌ ಸ್ಕ್ಯಾನರ್‌, ಪಿಪಿಇ ಕಿಟ್‌, ಗ್ಲೌಸ್‌, ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ಒಳಗೊಂಡ ವೈದ್ಯಕೀಯ ಪರಿಕರಗಳ ಕಿಟ್‌ ಅನ್ನು ಖರೀದಿಸಿ, ಎಲ್ಲ ಗ್ರಾಮ ಆರೋಗ್ಯ ಸೇವಾ ಕೇಂದ್ರಗಳಿಗೆ ವಿತರಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳ
ಬೇಕು.ಪರಿಕರಗಳನ್ನು ಈಗಾಗಲೇ ಖರೀದಿಸಿದ್ದರೆ, ಇದಕ್ಕೆ ಭರಿಸಿರುವ ವೆಚ್ಚವನ್ನು ಜಿಲ್ಲಾ ಪಂಚಾಯಿತಿ ಹಂತದಲ್ಲಿ ಕ್ರೋಡೀಕರಿಸಿ, ಮರುಪಾವತಿಗೆ ಪ್ರಸ್ತಾವ ಸಲ್ಲಿಸುವಂತೆಪಂಚಾಯತ್‌ ರಾಜ್‌ ಆಯುಕ್ತರು ತಿಳಿಸಿದ್ದಾರೆ.

1,500 ಆಕ್ಸಿ ಮೀಟರ್‌ ವಿತರಣೆ: ‘ಜಿಲ್ಲೆಯ 1,500 ಆಶಾ ಕಾರ್ಯಕರ್ತೆಯರಿಗೆ ಪಲ್ಸ್‌ ಆಕ್ಸಿ ಮೀಟರ್‌ಗಳನ್ನು ಖರೀದಿಸಿ, ವಿತರಿಸುತ್ತಿದ್ದೇವೆ. ಉಳಿದ ವೈದ್ಯಕೀಯ ಪರಿಕರಗಳ ದಾಸ್ತಾನು ಎಷ್ಟಿದೆ ಎಂಬುದನ್ನು ನೋಡಿಕೊಂಡು, ಅಗತ್ಯವಿರುವಷ್ಟು ಉಪಕರಣಗಳನ್ನು ಖರೀದಿಸುತ್ತೇವೆ ಎಂದು ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಮಾಹಿತಿ ನೀಡಿದರು.

224 ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷ, ಪಿಡಿಒ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ‘ಕಾರ್ಯಪಡೆ’ಗಳನ್ನು ಈಗಾಗಲೇ ರಚಿಸಿದ್ದೇವೆ. ಗ್ರಾಮಮಟ್ಟದಲ್ಲೂ ಶಿಕ್ಷಕಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪಡೆ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT