ತಡಸ (ದುಂಡಶಿ): ರೈತರು ಬಿತ್ತನೆ ಮಾಡುವ ಮುನ್ನ ಬೀಜೋಪಚಾರ ಮಾಡುವ ಮೂಲಕ ಬಿತ್ತನೆ ಬೀಜವನ್ನು ಹಾಳಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಸಂತೋಷ್ ಎಚ್.ಎಂ. ಹೇಳಿದರು.

ದುಂಡಶಿ ಹೋಬಳಿಯ ಕುನ್ನೂರ, ಹೊಸೂರ ಗ್ರಾಮಗಳಲ್ಲಿ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯಾವ ಯಾವ ಮಣ್ಣಿನಲ್ಲಿ ಯಾವ ಬೀಜ ಬಿತ್ತಬೇಕು ಎಂಬುವ ಬಗ್ಗೆ ಸಮೀಪದ ರೈತ ಸಂಪರ್ಕ ಕೇಂದ್ರವಾಗಲಿ ಅಥವಾ ಕೃಷಿ ವಿಶ್ವವಿದ್ಯಾಲಯದ ತಜ್ಞರನ್ನು ಮಣ್ಣು ಪರೀಕ್ಷೆಗೆ ಒಳಪಡಿಸುವ ಮೂಲಕ ಗುಣಮಟ್ಟದ ಕೃಷಿಯನ್ನು ಮಾಡಬೇಕು’ ಎಂದರು.

ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಪುಷ್ಪಾ ಚೇತನ್ ಕುಮಾರ, ‘ನಮ್ಮ ಸಂಸ್ಥೆಯಲ್ಲಿ ಹಲವಾರು ಹೂವು, ಹಣ್ಣು ಮತ್ತು ತರಕಾರಿ ಬೀಜಗಳು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಜೈವಿಕ ಗೊಬ್ಬರ ಮತ್ತು ರೋಗನಾಶಕಗಳು ಲಭ್ಯ ಇವೆ’ ಎಂದು ತಿಳಿಸಿದರು.

ವಿಜ್ಞಾನಿ ಬಸಮ್ಮ ಹಾದಿಮನಿ, ವಿವಿಧ ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ತಿಳಿಸಿದರು.

ಐಎಫ್ಸಿಒ ಕಂಪನಿಯ ವ್ಯವಸ್ಥಾಪಕ ಶಶಿಧರ್, ರೈತರು ತಮ್ಮ ಹೊಲಗದ್ದೆಗಳಿಗೆ ಡ್ರೋನ್ ಮೂಲಕ ಔಷಧ ಸಿಂಪಡಣೆಗೆ ಮಾಡುವ ತಾಂತ್ರಿಕತೆಯ ಮಹತ್ವದ ಕುರಿತು ತಿಳಿಸಿದರು.

ಶಿಗ್ಗಾವಿ ತಾಲ್ಲೂಕಿನ ಆರ್ಥಿಕ ಸಾಕ್ಷರತಾ ಕೇಂದ್ರದ ಅಧಿಕಾರಿ ರಾಜು ಕೆಂಭಾವಿ, ರೈತರು ಹೊಲಗತ್ತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ದುರಂತದಿಂದ ಕೂಲಿಕಾರ್ಮಿಕರು, ರೈತರ ಜೀವಹಾನಿಯಾದರೆ ಸಿಗುವ ವಿಮೆ ಕುರಿತು ತಿಳಿಸಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಮಾಲತಿ ಆರ್, ನೇತ್ರಾವತಿ ಬಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶಿವಾನಂದ ದಾವಣಗೆರೆ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರಾಜು ಜಂಗ್ಲೆಪ್ಪನವರ, ದುಂಡಶಿ ಹೋಬಳಿಯ ಕೃಷಿ ಸಖಿಯರು, ರೈತ ಮುಖಂಡರು, ರೈತ ಮಹಿಳೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.