ಭಾನುವಾರ, ಜನವರಿ 19, 2020
19 °C

ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಶೀಘ್ರ ಜಾರಿ: ಸಚಿವ ಸುರೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕಡ್ಡಾಯ ವರ್ಗಾವಣೆ’ ಎಂಬುದು ಶಿಕ್ಷೆಯ ರೀತಿಯಲ್ಲಿದೆ. ಹಾಗಾಗಿ ‘ಶಿಕ್ಷಕ ಸ್ನೇಹಿ ವರ್ಗಾವಣೆ’ ಕಾಯ್ದೆಯನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು. 

ಹಾವೇರಿ ತಾಲ್ಲೂಕು ನೆಲೋಗಲ್ಲ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. 2017ರಲ್ಲಿ ಜಾರಿಗೆ ಬಂದ ‘ಕಡ್ಡಾಯ ವರ್ಗಾವಣೆ ನೀತಿ’ ಎಲ್ಲರಿಗೂ ಬೇಸರ ತರಿಸಿದೆ. ಕಡ್ಡಾಯ ರಜೆ, ಕಡ್ಡಾಯ ನಿವೃತ್ತಿ ರೀತಿಯಲ್ಲಿ ಕಡ್ಡಾಯ ವರ್ಗಾವಣೆ ಕೂಡ ಶಿಕ್ಷೆಯಾಗಿದೆ. ಹಾಗಾಗಿ ಶಿಕ್ಷಕ ಸ್ನೇಹಿ ನೀತಿಯನ್ನು ಬರುವ ವಿಧಾನಮಂಡಲದಲ್ಲಿ ಮಂಡಿಸಿ, ಜಾರಿಗೆ ತರಲಾಗುವುದು. ವರ್ಗಾವಣೆ ಪ್ರಕ್ರಿಯೆಯನ್ನು ಜೂನ್‌ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು