ಉಕ್ಕಿ ಹರಿದ ತುಂಗಭದ್ರೆ: ಜನ ಜೀವನ ಅಸ್ತವ್ಯಸ್ತ

7

ಉಕ್ಕಿ ಹರಿದ ತುಂಗಭದ್ರೆ: ಜನ ಜೀವನ ಅಸ್ತವ್ಯಸ್ತ

Published:
Updated:
Deccan Herald

ಕುಮಾರಪಟ್ಟಣ: ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಇಲ್ಲಿಗೆ ಸಮೀಪದ ಮುದೇನೂರು ಗ್ರಾಮ ಪಂಚಾಯ್ತಿ ಕಚೇರಿ ಜಲಾವೃತಗೊಂಡಿದೆ.

ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಭದ್ರಾ ಜಲಾಶಯದಿಂದ ನೀರು ಹೊರ ಬಿಟ್ಟ ಪರಿಣಾಮ ನದಿಯಲ್ಲಿ ಹರಿವಿನ ಪ್ರಮಾಣ ಹೆಚ್ಚಿದೆ. 

ನದಿ ದಂಡೆಯಲ್ಲಿರುವ ಮುದೇನೂರು, ಮಾಕನೂರು, ಕವಲೆತ್ತು, ಕೊಡಿಯಾಲ ಹೊಸಪೇಟೆ, ನಲವಾಗಲ, ಐರಣಿ, ಹಿರೇಬಿದರಿ ಗ್ರಾಮಗಳಲ್ಲಿ ಭತ್ತದ ಹೊಲಗಳೂ ಜಲಾವೃತಗೊಂಡಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. 

ಕವಲೆತ್ತು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ-4ರ ಬಳಿ ದೇವಸ್ಥಾನ ಹಾಗೂ ಹುಲ್ಲಿನ ಬಣವೆಗಳು ನೀರಿನಿಂದ ಆವರಿಸಿವೆ.  ಮಾಕನೂರು, ಕೊಡಿಯಾಲ ಹೊಸಪೇಟೆ ಗ್ರಾಮಗಳಲ್ಲಿ ಕೆಲವೆಡೆ ನದಿ ಸಮೀಪಕ್ಕೆ ಜನರು ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.    ಮೈದುಂಬಿ ಹರಿಯುತ್ತಿರುವ ನದಿಯನ್ನು ನೋಡಲು ಜನರು ದೌಡಾಯಿಸುತ್ತಿದ್ದಾರೆ.

ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುವ ತನಕ ಯಾರೂ ಸಮೀಪ ಹೋಗಬಾರದು ಎಂದು ಎಂದು ಕುಮಾರಪಟ್ಟಣ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಮಂಜುನಾಥ.ಎ ಎಚ್ಚರಿಕೆ ನೀಡಿದ್ದಾರೆ. 

ಅಗತ್ಯಬಿದ್ದರೆ ಗಂಜಿಕೇಂದ್ರ 
ನದಿ ದಡ ಸಮೀಪದ ಗ್ರಾಮಗಳಲ್ಲಿ ನಮ್ಮ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕರು ಬೀಡು ಬಿಟ್ಟಿದ್ದಾರೆ. ನಾನೂ ಕುಪ್ಪೇಲೂರು, ಮೇಡ್ಲೇರಿ ಹೋಬಳಿಗಳಿಗೆ ಭೇಟಿ ನೀಡಿ ಗಮನಿಸಿದ್ದೇನೆ. ನದಿ ನೀರಿನ ಹರಿವು ಇನ್ನೂ ಹೆಚ್ಚಾಗುವ ಸಂಭವ ಇದೆ. ಅವಶ್ಯಕತೆ ಬಿದ್ದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ರಾಣೆಬೆನ್ನೂರು ತಾಲ್ಲೂಕಿನ ತಹಶೀಲ್ದಾರ್ ಕೆ. ರಾಮಮೂರ್ತಿ ತಿಳಿಸಿದರು.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !