ಬ್ಯಾಡಗಿ ಪಟ್ಟಣದ ಅಳವಡಿಸಿರುವ ನಿರಂತರ ನೀರು ಯೋಜನೆಯ ಮೀಟರ್ ನಳದಲ್ಲಿ ಪರೀಕ್ಷೆಗೆ ಬಿಟ್ಟಿರುವ ನೀರು ಸಣ್ಣಗೆ ಬರುತ್ತಿದೆ.
ನದಿ ನೀರಿನಿಂದ ತುಂಬಿಸಿದ್ದ ಕೆರೆಗಳು ಖಾಲಿಯಾಗುವ ಹಂತಕ್ಕೆ ಬಂದಿದೆ. ಇಂಥ ಕೆರೆಗಳನ್ನು ಹೂಳು ತೆಗೆಸಿ ಹೆಚ್ಚು ನೀರು ಸಂಗ್ರಹಿಸುವಂತೆ ಮಾಡಬೇಕು
ಕಿರಣ ಗಡಿಗೋಳ ರೈತ ಮುಖಂಡ
‘6 ಲಕ್ಷ ಲೀಟರ್ ಬದಲು 10 ಲಕ್ಷ ಲೀಟರ್ ಬಳಕೆ’
‘ತಾಲ್ಲೂಕಿನ ಕದರಮಂಡಲಗಿ ಗ್ರಾಮ ಪಂಚಾಯಿತಿ 6 ಲಕ್ಷ ಲೀಟರ್ ನದಿ ನೀರನ್ನು ಬಳಸಬೇಕು. ಆದರೆ ಸುಮಾರು 10 ಲಕ್ಷಕ್ಕೂ ಹೆಚ್ಚು ಲೀಟರ್ ನದಿ ನೀರು ಬಳಸುತ್ತಿದೆ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ನೀರು ಹರಿಯುವುದನ್ನು ಪ್ಲೋ ಮೀಟರ್ ಮೂಲಕ ಅಳವಡಿಸಿದ್ದರೂ ನೇರವಾಗಿ ನೀರು ಬಳಸಲಾಗುತ್ತಿದೆ. ಇದರಿಂದ ಪಟ್ಟಣಕ್ಕೆ ಕಡಿಮೆ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಇಲ್ಲಿಯ ಜನರಿಗೆ ತೊಂದರೆಯಾಗುತ್ತಿದೆ‘ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ತಿಳಿಸಿದರು. ‘ಈ ವಿಷಯವನ್ನು ಶಾಸಕರ ಗಮನಕ್ಕೂ ತರಲಾಗಿದೆ. ಅಲ್ಲಿಯ ಪಿಡಿಒ ಹಾಗೂ ಸಿಬ್ಬಂದಿ ಕರೆಸಿ ಎಚ್ಚರಿಕೆ ನೀಡಿದ್ದರೂ ನಿಯಂತ್ರಣ ಸಾಧ್ಯವಾಗಿಲ್ಲ. ಸದ್ಯ ಮ್ಯಾನುವಲ್ ಆಗಿ ನೀರು ಸರಬರಾಜಿನಲ್ಲಿ ಕಡಿಮೆ ಮಾಡಲಾಗುತ್ತಿದೆ. ಅಲ್ಲದೆ ಬೇಸಿಗೆ ಸಮೀಪಿಸಿದ್ದರಿಂದ ನದಿಯಲ್ಲಿ ನೀರು ಖಾಲಿಯಾದಲ್ಲಿ ತೀವ್ರ ತೋದರೆಯಾಗಬಹುದೆಂದು ಭಾವಿಸಿ ಕುಡಿಯುವ ನೀರಿನ ಹೊಂಡದಲ್ಲಿ ನೀರು ಸಂಗ್ರಹಿಸಲಾಗುತ್ತದೆ. ಬಸನಕಟ್ಟಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಿದ್ದು ₹ 1.50 ಕೋಟಿಗೆ ಮಂಜೂರಾತಿ ದೊರೆತಿದೆ. ಆದರೆ ಹಣ ಇನ್ನೂ ಬಿಡುಗಡೆಯಾಗಿಲ್ಲ‘ ಎಂದರು.