ರಟ್ಟೀಹಳ್ಳಿ : ಪಟ್ಟಣದ ಆರಾಧ್ಯೆ ದೈವ ಸುಪ್ರಸಿದ್ಧ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ 6 ಗಂಟೆಯಿಂದ ಸಹಸ್ರಾರು ಭಕ್ತರ ಹರ್ಷೋದ್ಗಾರಗಳ ಮಧ್ಯೆ ಊರಿನ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ದೇವರ ರಥವು ಸಂಚರಿಸಿ ಕುಮಾರೇಶ್ವರ ಕಾಲೇಜು ಹತ್ತಿರ ಗಡಿ ತಲುಪಿ ಮತ್ತೆ ದೇವಸ್ಥಾನಕ್ಕೆ ಬಂದು ತಲುಪಿತು.

ರಥೋತ್ಸವ ಸಾಗುವ ದಾರಿಯುದ್ದಕ್ಕೂ ಗುಗ್ಗುಳ ಹಾಗೂ ಸಮಾಳಗಳು ಸಾಗಿದವು. ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆದು, ಬಾಳೆಹಣ್ಣು ನೇವೈದ್ಯಮಾಡಿ ಭಕ್ತಿ ಸಮರ್ಪಿಸಿದರು. ವಿವಿಧ ಸಂಘಟನೆಗಳ ಕಾರ್ಯಕರ್ತರು ಭಕ್ತರ ಅನುಕೂಲಕ್ಕಾಗಿ ಮಜ್ಜಿಗೆ, ಶರಬತ್, ಕುಡಿಯುವ ನೀರು, ಹಣ್ಣುಗಳನ್ನು ನೀಡಿದರು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಕುಸ್ತಿ ಪಂದ್ಯಾವಳಿ: ಪಟ್ಟಣದ ವೀರಭದ್ರೇಶ್ವರ ರಥೋತ್ಸವ ಮತ್ತು ಈದ್ ಉಲ್ ಫಿತ್ರ್ ನಿಮಿತ್ತ ಏ. 9 ಮತ್ತು 10 ರಂದು ಪಟ್ಟಣದ ಇಸ್ಲಾಂನಗರ ತುಮ್ಮಿನಕಟ್ಟೆ ರಸ್ತೆಯ ಬಳಿ ಇರುವ ಮೈದಾನದಲ್ಲಿ ಬಯಲು ಜಂಗಿ ಕುಸ್ತಿ ಏರ್ಪಡಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ ₹ 25 ಸಾವಿರ, ದ್ವಿತೀಯ ₹10 ಸಾವಿರ, ಮತ್ತು ತೃತೀಯ ಬಹುಮಾನ ₹7500 ನೀಡಲಾಗುವುದು ಎಂದು ಕುಸ್ತಿ ಕಮಿಟಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.