ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯೆ ಶ್ರೇಷ್ಠ ಸಂಪತ್ತು: ಶಿವಾಚಾರ್ಯ ಶ್ರೀ

Published 10 ಮಾರ್ಚ್ 2024, 14:17 IST
Last Updated 10 ಮಾರ್ಚ್ 2024, 14:17 IST
ಅಕ್ಷರ ಗಾತ್ರ

ಹಾವೇರಿ: ‘ಹಣ, ಬೆಳ್ಳಿ, ಬಂಗಾರ ವಸ್ತುಗಳನ್ನು ಕದಿಯಬಹುದು. ಕದಿಯಲಾರದ ಸಂಪತ್ತು ವಿದ್ಯೆ ಮಾತ್ರ’ ಎಂದು ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಗೌರಿಮಠದ ಮಲ್ಲಿಕಾರ್ಜುನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ವಿದ್ಯೆ ಶ್ರೇಷ್ಠ ಸಂಪತ್ತು. ಮಕ್ಕಳಿಗೆ ವಿದ್ಯೆಯ ಮಹತ್ವ ತಿಳಿಸಬೇಕು’ ಎಂದರು.

ನಿವೃತ್ತ ಪ್ರಾಚಾರ್ಯ ಪಿ.ಸಿ. ಹಿರೇಮಠ ಅವರು ಮಾತನಾಡಿ, ‘ವಿದ್ಯಾರ್ಥಿಗಳು ತಾಯಿ ಗರ್ಭದಲ್ಲಿ ಹುಟ್ಟಿರುವುದು ಮಾತ್ರವಲ್ಲ, ಶಿಕ್ಷಕರ ಹೃದಯದಿಂದ ಹುಟ್ಟಿದ ಮಕ್ಕಳು’ ಎಂದು ಶಿಕ್ಷಕರ ಹಾಗೂ ಮಕ್ಕಳ ಬಾಂಧವ್ಯದ ಬಗ್ಗೆ ವಿವರಿಸಿದರು.

ಮುಖಂಡ ಎಂ.ಎಸ್. ಕೊರಿಶೆಟ್ಟರ್ ಮಾತನಾಡಿ, ‘ಧೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಶಾಲೆಯ ಮತ್ತು ಪಾಲಕರಿಗೆ ಕೀರ್ತಿ ತರಬೇಕು’ ಎಂದರು.

ಮುಖ್ಯಶಿಕ್ಷಕ ಶಂಕರ ಅಕ್ಕಸಾಲಿ, ತಸ್ಮಿಯಾ ಬಾಗಲಕೋಟಿ, ಪ್ರಿಯಾಂಕಾ ತುಂಗಳ, ಮಿಸಬಾ ನೆಗಳೂರ, ಹಿರೇಮಠ, ಮಂಗಳಾ ಗೌಡರ, ಇಂಚರ ಮಲ್ಲಪ್ಪನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT