ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಕೃತಿಯ ಮೂಲ ಪುರುಷ ವಿಶ್ವಕರ್ಮ’

Published 26 ಸೆಪ್ಟೆಂಬರ್ 2023, 2:54 IST
Last Updated 26 ಸೆಪ್ಟೆಂಬರ್ 2023, 2:54 IST
ಅಕ್ಷರ ಗಾತ್ರ

ಬ್ಯಾಡಗಿ: ‘ವರಾಹ ಪುರಾಣದ ಪ್ರಕಾರ ಬ್ರಹ್ಮದೇವರು ವಿಶ್ವಕರ್ಮನನ್ನು ಭೂಮಿಯಲ್ಲಿ ಸೃಷ್ಠಿಸಿದನು ಎನ್ನುವ ಉಲ್ಲೇಖವಿದ್ದು, ವಿಶ್ವಕರ್ಮನನ್ನು ಬ್ರಹ್ಮಾಂಡದ ದೈವಿಕ ವಾಸ್ತು ಶಿಲ್ಪಿ ಮತ್ತು ಋಗ್ವೇದದಲ್ಲಿ ದೈವಿಕ ಸೃಜನಶೀಲತೆಯ ವ್ಯಕ್ತಿತ್ವ ಎಂದು ಪರಿಗಣಿಸಲಾಗಿದೆ’ ಎಂದು ಶಿರಸ್ತೇದಾರ ನಾಗರತ್ನಾ ಕಾಳೆ ಅಭಿಪ್ರಾಯಪಟ್ಟರು.

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ದೇವತೆಗಳಿಗೆ ವಿಷ್ಣುವಿನ ಸುದರ್ಶನ ಚಕ್ರ, ಶಿವನ ತ್ರಿಶೂಲ ಹಾಗೂ ಕಾರ್ತಿಕೇಯನ ಭರ್ಚಿಯಂತಹ ಆಸಾಧಾರಣ ಆಯುಧಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದರು.

ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಜಕಾಣಾಚಾರ್ಯ ಬಡಿಗೇರ ಮಾತನಾಡಿ, ಪ್ರಕೃತಿಯ ಮೂಲ ಪುರುಷ ವಿಶ್ವಕರ್ಮ ಎಂಬುದು ಸರ್ವಕಾಲಿಕ ಸತ್ಯ, ವಿಶ್ವಕರ್ಮ ಸಮಾಜ ಎಲ್ಲಾ ಸಮಾಜಗಳ ಜೊತೆಯಲ್ಲಿ ಸಮನ್ವಯತೆಯಿಂದ ಬದುಕು ಸಾಗಿಸುತ್ತಾ ಬಂದಿದೆ. ಜಗತ್ತಿನ ಕಚಾರ ವಸ್ತುಗಳನ್ನು ಸೃಷ್ಠಿ ಮಾಡಿರುವ ವಿಶ್ವಕರ್ಮ ಸಮಾಜ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ಬರಬೇಕೆಂದು ಮನವಿ ಮಾಡಿಕೊಂಡರು.

ಪುರಸಭೆ ಸದಸ್ಯರಾದ ಗಾಯತ್ರಿ ರಾಯ್ಕರ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಕವಿತಾ ಸೊಪ್ಪಿನಮಠ, ಫಕ್ಕೀರಮ್ಮ ಛಲವಾದಿ, ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಸಮಾಜದ ಮುಖಂಡರಾದ ನಾರಾಯಣಾಚಾರ್ಯ, ವಸಂತಾಚಾರ್ಯ, ಮೌನೇಶ ಬಡಿಗೇರ, ಮೌನೇಶ ಕಮ್ಮಾರ, ಶಿವಾನಂದ ಬಡಿಗೇರ, ಮೌನೇಶ ಕಮ್ಮಾರ, ಮನೋಹರ ಅರ್ಕಾಚಾರಿ, ಸತೀಶ ಕಮ್ಮಾರ, ನಾಗೇಶ ಕಮ್ಮಾರ, ಅರುಣ ಬಡಿಗೇರ, ಮಹಾಂತೇಶ ದಿಕ್ಷೀತ್, ಮಾಲತೇಶ ಬಡಿಗೇರ, ಮಂಜುನಾಥ ಬಡಿಗೇರ, ಶಿರಸ್ತೆದಾರ ಹನುಮಂತಪ್ಪ ಹತ್ತಿಮತ್ತೂರ, ಸಿಬ್ಬಂದಿ ನಾಗರಾಜ ಗೂಳೇರ, ಕಾವ್ಯಾ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT