ಹಾವೇರಿ ತಾಲ್ಲೂಕಿನ ದೇವಗಿರಿ ಬಳಿ ವರದಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದು – ಪ್ರಜಾವಾಣಿ ಚಿತ್ರಗಳು/ ಮಾಲತೇಶ ಇಚ್ಚಂಗಿ
ಹಾವೇರಿ ಜಿಲ್ಲೆಯ ನಾಗನೂರು–ಕೂಡಲ ಮಧ್ಯೆದ ವರದಾ ನದಿಯ ಬಾಂದಾರ ಮುಳುಗಡೆಯಾಗಿ ನೀರು ಹರಿಯುತ್ತಿರುವುದು
ಪ್ರತಿ ವರ್ಷ ಸಂಚಾರ ಸಮಸ್ಯೆ ಅನುಭವಿಸಿ ಸಾಕಾಗಿದೆ. ಇನ್ನಾದರೂ ಜನಪ್ರತಿನಿಧಿಗಳು–ಅಧಿಕಾರಿಗಳು ಮೇಲ್ಸೇತುವೆ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಬೇಕು
ರಮೇಶ ಉಳ್ಳಾಗಡ್ಡಿ ಕಳಸೂರು ನಿವಾಸಿ
‘ಬಸ್ಸಿನ ಅನಾನುಕೂಲತೆ’
‘ಸಾಮಾನ್ಯ ದಿನಗಳಲ್ಲಿ ಗ್ರಾಮದಿಂದ ಹಾವೇರಿ ಹಾಗೂ ಸವಣೂರಿಗೆ ಮೆಳ್ಳಾಗಟ್ಟಿ–ತೊಂಡೂರು ಗ್ರಾಮದ ಮಾರ್ಗದಲ್ಲಿ ಬಸ್ಸಿನ ವ್ಯವಸ್ಥೆಯಿದೆ. ಆದರೆ ಹಲವರು ಬಾಂದಾರ ಮೂಲಕ ಹಾವೇರಿಗೆ ಹೋಗಿ ಬರುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಬಾಂದಾರ ಬಂದ್ ಆಗುವುದರಿಂದ ಹಲವರು ಬಸ್ಸನ್ನೇ ಅವಲಂಬಿಸಿದ್ದಾರೆ. ಆದರೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುತ್ತಿಲ್ಲ’ ಎಂದು ಗ್ರಾಮಸ್ಥರು ದೂರಿದರು. ‘ನಿಗದಿಯಂತೆ ಕೆಲ ಬಸ್‌ಗಳು ಮಾತ್ರ ಗ್ರಾಮಕ್ಕೆ ಬಂದು ಹೋಗುತ್ತದೆ. ಬಾಂದಾರ ಮುಳುಗಡೆಯಾದ ಸಂದರ್ಭದಲ್ಲಾದರೂ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು. ಇಲ್ಲದಿದ್ದರಿಂದ ಲಭ್ಯವಿರುವ ಬಸ್‌ನಲ್ಲಿ ಜೋತು ಬಿದ್ದು ಹೋಗಬೇಕಾದ ಸ್ಥಿತಿಯಿದೆ’ ಎಂದು ಹೇಳಿದರು.