ಹಾವೇರಿ: ‘ಮಕ್ಕಳ ಶೈಕ್ಷಣಿಕ ಹಾಗೂ ಪಠ್ಯೇತರ ಆಸಕ್ತಿಗಳನ್ನು ಪ್ರೋತ್ಸಾಹಿಸಲು ರಾಜ್ಯ ಬಾಲ ವಿಕಾಸ ಅಕಾಡೆಮಿ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ’ ಎಂದು ಅಕಾಡೆಮಿ ಅಧ್ಯಕ್ಷ ಮಹೇಶ ತೆಂಗಿನಕಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿನ ಪರೀಕ್ಷಾಭಯ ನಿವಾರಣೆಯ ದೃಷ್ಠಿಯಿಂದ ಪರೀಕ್ಷೆ ಎದುರಿಸುವ ಬಗೆ ಹೇಗೆ ಎಂಬ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದು ದಿನದ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಪೈಲಟ್ ಯೋಜನೆಯಾಗಿ ಕೈಕೊಂಡು ಈ ಸಂವಾದ ಕಾರ್ಯಕ್ರಮದ ಮೂಲಕ ರಾಜ್ಯದ 15 ಸಾವಿರ ಮಕ್ಕಳನ್ನು ತಲುಪುವುದು ಅಕಾಡೆಮಿಯ ಉದ್ದೇಶವಾಗಿದೆ ಎಂದರು.

ಈಗಾಗಲೇ ರಾಜ್ಯದ 20 ಜಿಲ್ಲೆಗಳಲ್ಲಿ ಈ ಸಂವಾದ ಕಾರ್ಯಕ್ರಮ ಪೂರ್ಣಗೊಂಡಿದ್ದು, ಕಾರ್ಯಕ್ರಮ ಯೋಜಿಸಿದ ಕೆಲ ಕಡೆಗಳಲ್ಲಿ ಪ್ರಾಯೋಜಕರು ಮುಂದೆ ಬಂದಿದ್ದಾರೆ. ಮುಂದಿನ ವರ್ಷದಿಂದ ಈ ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ರಾಜ್ಯಾದ್ಯಂತ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಮಕ್ಕಳಲ್ಲಿನ ಸಾಹಿತ್ಯಿಕ ಆಸಕ್ತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅಕಾಡೆಮಿ ಈ ವರ್ಷದಿಂದ ‘ಮಕ್ಕಳ ಚಂದಿರ’ ಹೆಸರಿನಲ್ಲಿ ಮಕ್ಕಳ ಪುಸ್ತಕ ಪ್ರಕಟಣೆಗಳನ್ನು ಪ್ರೋತ್ಸಾಹಿಸಲಿದೆ. ಸ್ವರಚಿತ ಕವಿತೆ, ಕತೆ, ನಾಟಕ, ಅನುವಾದಿತ ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರಶಸ್ತಿಗಾಗಿ ಈಗಾಗಲೇ ಆಹ್ವಾನಿಸಲಾಗಿದ್ದು, ಅರ್ಜಿ ಸ್ವೀಕಾರಕ್ಕೆ ಮಾ. 10 ಕೊನೆಯ ದಿನವಾಗಿದೆ ಎಂದು ಹೇಳಿದರು.

ನಗರ ಪ್ರದೇಶದ ಮಕ್ಕಳಿಗೆ ಹಳ್ಳಿಯ ಬದುಕು ದೂರವಾಗುತ್ತಿದ್ದು, ಅವರಿಗೆ ಹಳ್ಳಿಯ ಬದುಕನ್ನು ಹತ್ತಿರದಿಂದ ಕಾಣುವಂತಾಗಲು ‘ಮಕ್ಕಳ ಮಿತ್ರಪಡೆ’ ಎಂಬ ವಿನೂತನ ಯೋಜನೆ ರೂಪಿಸಿ, ಮಕ್ಕಳು ಹಳ್ಳಿಗಳ ಬದುಕು ತಿಳಿಯುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಆರಂಭಿಕವಾಗಿ ಈ ಯೋಜನೆಯನ್ನು ಬಳ್ಳಾರಿ, ದಾವಣಗೆರೆ, ವಿಜಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲೆ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಆಯಾ ಜಲ್ಲೆಗಳಲ್ಲಿ 7 ಜನ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ ಎಂದು ತಿಳಿಸಿದರು.

ಜ್ಞಾನ ಸಮುಚ್ಛಯ: ಸತತ ಓದಿನ ಒತ್ತಡದಲ್ಲಿ ಕಾಲ ಕಳೆಯುವ ಮಕ್ಕಳ ಮನೋವಿಕಾಸದ ಜೊತೆಗೆ ಆಹ್ಲಾದಕರ ವಾತಾವರಣದಲ್ಲಿ ನಿರ್ಮಿಸುವ ಉದ್ದೇಶದಿಂದ ಈಜುಗೊಳ, ಕ್ರೀಡಾಂಗಣ, ಪ್ರಾಣಿ ಸಂಗ್ರಹಾಲಯ, ಮತ್ತು ವಾಸ್ತವ್ಯಕ್ಕೆ 500 ಕೊಠಡಿಗಳ ಬೃಹತ್ ಜ್ಞಾನ ಸಮುಚ್ಛಯವನ್ನು ಸ್ಥಾಪಿಸಲು ಅಕಾಡೆಮಿ ಉದ್ದೇಶಿಸಿದೆ. ಇದಕ್ಕಾಗಿ 70 ರಿಂದ 80 ಎಕರೆಯಷ್ಟು ಜಾಗೆಯನ್ನು ಒದಗಿಸುವ ಕುರಿತು ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.ಅಕಾಡೆಮಿಯ ಯೋಜನಾಧಿಕಾರಿ ಮಾಲತಿ ಪೋಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.