ಹಾವೇರಿ: ಜಿಲ್ಲೆಯಾದ್ಯಂತ ಬುಧವಾರ ಆರಂಭಗೊಂಡ ದ್ವಿತೀಯ ವರ್ಷದ ಪಿಯುಸಿ ವಾರ್ಷಿಕ ಪರೀಕ್ಷೆಗಳು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ನಡೆದಿದ್ದು, ಯಾವುದೇ ಡಿಬಾರ್ ಆದ ವರದಿಯಾಗಿಲ್ಲ.

ಬುಧವಾರ ನಡೆದ ಪರೀಕ್ಷೆಗೆ ಕುಳಿತುಕೊಂಡ ಒಟ್ಟು 6,272 ವಿದ್ಯಾರ್ಥಿಗಳಲ್ಲಿ ಸಂಖ್ಯಾಶಾಸ್ತ್ರ ವಿಷಯದ 240 ವಿದ್ಯಾರ್ಥಿಗಳ ಪೈಕಿ 239 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಿದ್ದು, ಒಬ್ಬ ವಿದ್ಯಾರ್ಥಿ ಗೈರು ಉಳಿದಿದ್ದಾನೆ. ರಾಜ್ಯಶಾಸ್ತ್ರ ವಿಷಯದ ಪರೀಕ್ಷೆ 6033 ವಿದ್ಯಾರ್ಥಿಗಳ ಪೈಕಿ 5781 ವಿದ್ಯಾರ್ಥಿಗಳು ಹಾಜರಾಗಿದ್ದು, 252 ವಿದ್ಯಾರ್ಥಿಗಳು ಗೈರು ಉಳಿದ್ದಾರೆ.

ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲಾಗಿದ್ದು, ಯಾವುದೇ ಅಕ್ರಮಗಳು ನಡೆದಿಲ್ಲ. ಅಲ್ಲದೇ, ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆದ ಘಟನೆ ನಡೆದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆ ಬರೆದ ಅಂಗವಿಕಲ ವಿದ್ಯಾರ್ಥಿ: ಸವಣೂರ ತಾಲ್ಲೂಕಿನ ಕಡಗೋಳ ಗ್ರಾಮದ ಅಂಬೇಡ್ಕರ ಕಾಲೇಜಿನ ದೈಹಿಕ ಅಂಗವಿಕಲ ವಿದ್ಯಾರ್ಥಿ ನವೀನ ಗುತ್ತಲ ಕುಟುಂಬದವರ ಸಹಾಯದಿಂದ ನಗರದ ಹುಕ್ಕೇರಿಮಠದ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ರಾಜ್ಯಶಾಸ್ತ್ರ ವಿಷಯ ಪರೀಕ್ಷೆ ಬರೆದರು.

ಅಕ್ಕಿಆಲೂರು ವರದಿ
ಅಕ್ಕಿಆಲೂರ: ಇಲ್ಲಿಯ ಎನ್.ಡಿ.ಪಿ.ಯು. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬುಧವಾರದಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಶಾಂತಯುತವಾಗಿ ಆರಂಭವಾಗಿವೆ.

ಸ್ಥಳೀಯ ಎನ್.ಡಿ.ಪಿ.ಯು. ಕಾಲೇಜು, ಎಸ್.ಎಸ್. ಪಿ.ಯು. ಕಾಲೇಜು, ಆಡೂರು, ಚಿಕ್ಕಾಂಶಿ–ಹೊಸೂರು ಮತ್ತು ಕೂಸನೂರಿನ ಸರ್ಕಾರಿ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಮೊದಲ ದಿನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಜ್ಯಶಾಸ್ತ್ರ ವಿಷಯದ ಪರೀಕ್ಷೆ ಬರೆದಿದ್ದು, ಒಟ್ಟು 365 ರ ಪೈಕಿ 9 ವಿದ್ಯಾರ್ಥಿಗಳು ಗೈರಾಗಿದ್ದು, 356 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಮುನ್ನೆಚ್ಚರಿಕೆ ಕ್ರಮವಾಗಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕೇಂದ್ರದ ಸುತ್ತಲೂ 200 ಮೀ. ಅಂತರದಲ್ಲಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಒಟ್ಟು 24 ಕೊಠಡಿಗಳಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳದಲ್ಲಿಯೇ ಕುಡಿಯುವ ನೀರು ಪೂರೈಸ ಲಾಗುತ್ತಿದೆ. ಒಟ್ಟಾರೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಕಾಲೇಜಿನ ಪ್ರಾಚಾರ್ಯ ಕೆ.ಎಸ್.ಕುಂಬಾರ ಪರೀಕ್ಷೆ ವ್ಯವಸ್ಥೆಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.