ಹಾವೇರಿ: `ಜಲಿಯನ್ ವಾಲ್ಬಾಗ್ದಲ್ಲಿ ನಿರ್ಮಿಸಿರುವ ಭಗತ್ಸಿಂಗ್ ಅವರ ಸ್ಮಾರಕದ ಮಾದರಿಯಲ್ಲಿಯೇ ಸ್ವಾತಂತ್ರ್ಯ ಯೋಧ ಮೈಲಾರ ಮಹಾ ದೇವಪ್ಪ ವೀರಸೌಧ ಸ್ಮಾರಕವನ್ನು ಹಾವೇರಿಯ ನಿರ್ಮಿಸಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ತಿಳಿಸಿದರು.

ಶನಿವಾರ ಹಾವೇರಿಯ ಮೈಲಾರ ಮಹಾದೇವಪ್ಪ ವೀರಸೌಧದ ಬಳಿ ನಿರ್ಮಿಸಿರುವ ಸಾಂಸ್ಕೃತಿಕ ಭವನ ಹಾಗೂ ಜಿಲ್ಲಾ ಸಾರ್ವಜನಿಕ ಗ್ರಂಥಾಲ ಯದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೆ ಪ್ರಾಣತೆತ್ತ ಭಗತ್ಸಿಂಗ್ ಅವರಂತೆಯೇ ಜಿಲ್ಲೆಯ ಮೈಲಾರ ಮಹಾದೇವಪ್ಪ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರು. ಜಲಿಯನ್ ವಾಲ್ಬಾಗನ್ಲ್ಲಲ್ಲಿರುವ ಭಗತ್ಸಿಂಗ್ರ ಸ್ಮಾರಕದಂತೆ ನಗರದ ವೀರಸೌಧದ ಬಳಿ ಮಹದೇವ ಮೈಲಾ ರರ ಸ್ಮಾರಕ ಈ ಭಾಗದ ಜನರ ಬೇಡಿಕೆಯಾಗಿದ್ದು, ಅವರ ಬೇಡಿಕೆಯಂತೆ ನಿರ್ಮಿಸಲಾಗುವುದು ಎಂದರು.

ಇದಕ್ಕಾಗಿ ತಾವು ಶೀಘ್ರದಲ್ಲಿಯೇ ಎಂಜಿನಿಯರ್ಯೊಬ್ಬರ ಜತೆ ಭಗತ್ಸಿಂಗ್ ಸ್ಮಾರಕವಿರುವ ಜಲಿಯನ್ವಾಲ್ಬಾಗ್ ಪ್ರದೇಶಕ್ಕೆ ತೆರಳಿ ಸ್ಮಾರಕ ವೀಕ್ಷಿಸಲಾಗುವುದು ಎಂದು ಹೇಳಿದರು,
ಗ್ರಂಥಾಲಯಗಳಿಗೆ ಮೂಲಸೌಲಭ್ಯ ಗಳನ್ನು ಕಲ್ಪಿಸಲಾಗುತ್ತಿದೆ. ಎರಡೂ ವರೆ ಕೋಟಿ ರೂ. ವೆಚ್ಚದಲ್ಲಿ ಎರಡು ಮತ್ತು ಮೂರನೇ ಮಹಡಿ ನಿರ್ಮಿಸ ಲಾಗುತ್ತದೆ. ಸಾರ್ವಜನಿಕರು ಗ್ರಂಥಾ ಲಯದ ಸದುಪಯೋಗ ಮಾಡಿಕೊಳ್ಳ ಬೇಕೆಂದು ಸಚಿವರು ಸಲಹೆ ನೀಡಿದರು.

ಸಾಂಸ್ಕೃತಿಕ ಭವನ ಹಾಗೂ ಗ್ರಂಥಾಲಯ ಉದ್ಘಾಟನೆ ನೆರವೇರಿ ಸಿದ ಇಂಧನ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಞಾಜೆ ಮಾತನಾಡಿ, ಇದೀಗ ನಿರ್ಮಿಸಿರುವ ಸಾಂಸ್ಕೃತಿಕ ಭವನ ದೇಶಕ್ಕೆ ಪ್ರಾಣತೆತ್ತ ಅಖಂಡ ಧಾರ ವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಗಾರರ ಚರಿತ್ರೆ, ಭಾವಚಿತ್ರ ಹಾಗೂ ಪೂರ್ಣ ಮಾಹಿತಿಯನ್ನು ಪ್ರತಿಬಿಂಬಿ ಸುವ ಭವನ ವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕರು ತಮ್ಮ ಮಕ್ಕಳನ್ನು ಈ ಸಾಂಸ್ಕೃತಿಕ ಭವನಕ್ಕೆ ಕಳುಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಪರಿಚಯಮಾಡಿಕೊಡಬೇಕು. ಸುಸ ಜ್ಜಿತ ಗ್ರಂಥಾಲಯಗಳಿದ್ದರೂ ಓದುಗರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ಸಚಿವೆ ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ವಹಿ ಸಿದ್ದರು.
ಜಿ.ಪಂ. ಅಧ್ಯಕ್ಷ ಮಂಜುನಾಥ ಓಲೇಕಾರ, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಗಿರೀಶ ತುಪ್ಪದ, ನಗರ ಸಭೆ ಅಧ್ಯಕ್ಷ ಜಗದೀಶ ಮಲಗೋಡ, ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಸೇರಿದಂತೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.