ಮೂಡಲಗಿ: ಇಲ್ಲಿಯ 6ನೇ ವಾರ್ಡ್‌ನಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಮಹಿಳೆಯರು ಸ್ಥಳೀಯ ಪುರಸಭೆಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 6ನೇ ವಾರ್ಡ್‌ನಲ್ಲಿ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಪುರಸಭೆಯಿಂದ ಟೆಂಡರ್ ಕರೆದು ಹಲವಾರು ವರ್ಷಗಳಾಗಿದ್ದರೂ ಸಹ ಇನ್ನೂವರೆಗೆ ಕಾಮಗಾರಿ ಪ್ರಾರಂಭಗೊಂಡಿಲ್ಲ. ಇಲ್ಲಿಯ ಮಹಿಳೆಯರ ಸಮಸ್ಯೆಯನ್ನು ಅರಿತು ಬೇಗನೆ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು.

ಇದರಿಂದ 4,5 ಮತ್ತು 6ನೇ ವಾರ್ಡ್‌ನ ಮಹಿಳೆಯರಿಗೂ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮಹಿಳೆಯರ ಶೌಚಾಲಯ ನಿರ್ಮಿಸುವಲ್ಲಿ ಪುರಸಭೆಯವರು ಹಿಂದೆಟು ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಸ್ಯೆಯನ್ನು ಅರಿತುಕೊಂಡು ಕೂಡಲೇ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು ಇಲ್ಲದಿದ್ದರೆ ಚಂಬು ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಬಿಜೆಪಿ ಉಪಾಧ್ಯಕ್ಷ ಪ್ರಕಾಶ ಮಾದರ, ಕುಮಾರ ಗಿರಡ್ಡಿ, ಹನಮಂತ ಸತರಡ್ಡಿ, ಮುಬಾರಕ ಡಾಂಗೆ, ವಾದುರಾಜ ದೇಸಾಯಿ, ರಾಘವೇಂದ್ರ ಪಾಟೀಲ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.