ಶನಿವಾರ, ಏಪ್ರಿಲ್ 4, 2020
19 °C

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಫಿನ್‌ಲ್ಯಾಂಡ್ ನಾಗರಿಕರ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ದ್ವಿಚಕ್ರ ವಾಹನದಲ್ಲಿ ನಗರದಲ್ಲಿ ಕಾಣಿಸಿಕೊಂಡ ಇಬ್ಬರು ಫಿನ್‌ಲ್ಯಾಂಡ್‌ ದೇಶದ ನಾಗರಿಕರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿ ಕಳುಹಿಸಿಕೊಟ್ಟ ಘಟನೆ ಮಂಗಳವಾರ ನಡೆಯಿತು.

ಮುಖ್ಯ ಬಸ್ ನಿಲ್ದಾಣ ಸಮೀಪದಲ್ಲಿ ಹೋಗುತ್ತಿದ್ದ ಇವರನ್ನು ಗುರುತಿಸಿದ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಅವರನ್ನು ವಿಚಾರಣೆ ನಡೆಸಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದ ಬಳಿಕ ಅವರನ್ನು ಕಳುಹಿಸಲಾಯಿತು ಎಂದು ಮೂಲಗಳು ದೃಢಪಡಿಸಿವೆ.

ಫಿನ್ ಲ್ಯಾಂಡ್ ದೇಶದ ಟೀಮೂ ಟೆನ್ಲಿ ಹಾಗೂ ಕೆರೆರಾ ರಾಣದಾಸ ಅವರು ಫೆ. 26ರಂದು ಕೊಚ್ಚಿ ವಿಮಾನನಿಲ್ದಾಣದ ಮೂಲಕ ಭಾರತಕ್ಕೆ ಬಂದಿದ್ದು ಅವರ ಪಾಸ್‌ಪೋರ್ಟ್ ದಾಖಲೆಗಳು ಸೂಚಿಸುತ್ತಿದ್ದು, ಅಲ್ಲಿಂದ ಅವರು ದ್ವಿಚಕ್ರ ವಾಹನದಲ್ಲಿ ನಿರಂತರ ಪ್ರವಾಸ ನಡೆಸಿರುವುದು ತಿಳಿದು ಬಂದಿದೆ.

ಸೂಕ್ತ ವಿಚಾರಣೆ ಹಾಗೂ ಮಾಹಿತಿ ಕಲೆ ಹಾಕಿದ ನಂತರ ಅವರನ್ನು ತರೀಕೆರೆ ಮಾರ್ಗವಾಗಿ ಮುಂದಿನ ಸ್ಥಳಕ್ಕೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು