ವಿಜಯಪುರ: ಕೋವಿಡ್–19 ಭೀತಿಯನ್ನು ಲೆಕ್ಕಿಸದೆ ರಂಗು ರಂಗಿನ ಬಣ್ಣದಾಟಕ್ಕೆ ಗುಮ್ಮಟ ನಗರಿ ಸಜ್ಜುಗೊಂಡಿದೆ.

ಬಣ್ಣದಾಟದ ಮುನ್ನಾ ದಿನವಾದ ಸೋಮವಾರ ಸಂಜೆ ನಗರದಲ್ಲಿ ಕಾಮದಹನ ಮಾಡಿ, ಅಧಿಕೃತ ಚಾಲನೆ ನೀಡಲಾಗಿದೆ.

ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪಿಚಕಾರಿ, ಬಣ್ಣ ಖರೀದಿ ಜೋರಾಗಿತ್ತು. ವಾಟರ್ ಗನ್, ಏರ್‌ಗನ್, ಪಿಸ್ತೂಲ್, ವಿಭಿನ್ನ ಆಕಾರದ ಪಿಚಕಾರಿಗಳನ್ನು ಜನರು ಉತ್ಸಾಹದಿಂದ ಖರೀದಿಸಿದರು. ಮಕ್ಕಳು ಕೂಡ ಮುಗಿಬಿದ್ದು ತಮ್ಮಿಷ್ಟದ ಪಿಚಕಾರಿಗಳನ್ನು ಖರೀದಿಸಿದರು.

ಕಾಲೇಜು ವಿದ್ಯಾರ್ಥಿಗಳು, ಯುವಕರು ಬಣ್ಣದಾಟಕ್ಕೆ ಸಜ್ಜಾಗಿದ್ದು, ಈಗಾಗಲೇ ತರಹೇವಾರಿ ಬಣ್ಣಗಳನ್ನು ಖರೀದಿಸಿದ್ದಾರೆ. ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಸಂಚರಿಸಿ, ಬಣ್ಣ ಹಚ್ಚಿ ಸಂಭ್ರಮಿಸಲು ಅಣಿಯಾಗಿದ್ದಾರೆ.

ಹಬ್ಬಕ್ಕೂ ಹಲವು ದಿನಗಳ ಮೊದಲೇ ನಗರದಲ್ಲಿ ಹಲಗೆಗಳ ಮಾರಾಟ, ಹಲಗೆ ವಾದನ ಜೋರಾಗಿತ್ತು. ಮಕ್ಕಳು, ಯುವಕರು ಸಂಜೆ ಹಲಗೆ ಬಾರಿಸುತ್ತ ಗಮನ ಸೆಳೆದಿದ್ದು, ಮಂಗಳವಾರ ಬಣ್ಣದಲ್ಲಿ ಮಿಂದೇಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.