ವಿಗ್ರಹ ಮಾರಾಟ: ಇಬ್ಬರ ಬಂಧನ
ಬೆಂಗಳೂರು: ‘ಅದೃಷ್ಟ’ದ ಹೆಸರಿನಲ್ಲಿ ಕೆಲವು ವಿಗ್ರಹ ಹಾಗೂ ನಾಣ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವೈಯಾಲಿಕಾವಲ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮುರು ತಾಲ್ಲೂಕಿನ ಭಾಗ್ಯಜ್ಯೋತಿ ನಗರದ ಮಹಮ್ಮದ್ ಮುಸ್ತಾಫ್ (38) ಹಾಗೂ ಮೊಳಕಾಲ್ಮುರು ಹಳೇ ಸಂತೆ ಮೈದಾನ ಎಸ್‌ಬಿಎಂ ಬಳಿಯ ನಿವಾಸಿ ಮೊಹಮ್ಮದ್ ಮುಬೀನ್ (44) ಬಂಧಿತರು.
‘ಇಬ್ಬರೂ ಆರೋಪಿಗಳು ಈ ವಿಗ್ರಹಗಳನ್ನು ಮನೆಗಳಲ್ಲಿ ಇಟ್ಟುಕೊಂಡರೆ ಅದೃಷ್ಟವೆಂದು ಹೇಳಿ ಮಾರಾಟ ಮಾಡಿ ಮೋಸ ಮಾಡುತ್ತಿದ್ದರು. ಬಿಂದಿಗೆ, ಬೈನಾಕ್ಯುಲರ್ ಹಾಗೂ ನಾಣ್ಯಗಳ ಜೊತೆಗೆ ಈ ವಿಗ್ರಹ ಸಹ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.