ಜೇವರ್ಗಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಜೇವರ್ಗಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರ ಕುರಿತು ಅವಹೇಳನಕಾರಿ ಮಾತನಾಡಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಜೇವರ್ಗಿಯಲ್ಲಿ ತಾಲ್ಲೂಕು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ರಾಜಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ನಂತರ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಯುವ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಎಸ್.ಎಸ್ ಸಲಗರ್, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರೌಫ್ ಹವಾಲ್ದಾರ್, ಎಮ.ಡಿ.ಇಮ್ರಾನ ಇನಾಮದಾರ, ಶಬ್ಬೀರ ಇನಾಮದಾರ, ಫತ್ರು ಪಟೇಲ, ಮಕ್ಬುಲ ಪಟೇಲ ಮಲ್ಲಾಬಾದ, ಬಬಲು ಇನಾಮದಾರ, ಮುಖೀದ ಗುತ್ತೇದಾರ, ಅಬ್ದುಲ್ ರಹಿಮಾನ್, ಅಫ್ರೋಜ ಪಟೇಲ್ ಇಮ್ತಿಯಾಜ್‌ಅಲಿ, ಮುಜುಖಾನ್, ಹಾಜಿ ಮುನ್ಸಿ, ನಿಂಗಣ್ಣ ನಾಟೀಕಾರ, ಶಕೀಲ ಪಟೇಲ್, ಯುನೂಸ್, ರಫೀಕ ಡಿ.ಕೆ, ಖಯೂಮ್ ಜಮಾದಾರ, ಅಲ್ಲಿಸಾಬ್ ಯಾತನೂರ, ಅಬ್ದುಲ್ ಇನಾಮದಾರ, ದಾವೂದ ಡಿ.ಕೆ, ಶಹಾಬುದ್ದೀನ್ ವರವಿ, ಶಾಹೀದ ಗಂವ್ಹಾರ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.