ಕಾಗೋಡು ಅಣ್ಣಪ್ಪ ನಿಧನ

7

ಕಾಗೋಡು ಅಣ್ಣಪ್ಪ ನಿಧನ

Published:
Updated:

ಸಾಗರ: ತಾಲ್ಲೂಕಿನ ಆವಿನಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ‌ಸದಸ್ಯ ಕಾಗೋಡು ಅಣ್ಣಪ್ಪ (72) ಅವರು ಬುಧವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಸಹೋದರನ ಪುತ್ರರಾಗಿದ್ದ ಅಣ್ಣಪ್ಪ ಅವರು ಕೆಲ ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮೃತರ ಶವವನ್ನು ಗುರುವಾರ ಬೆಳಿಗ್ಗೆ 7ರಿಂದ 10ವರೆಗೆ ಕಾಗೋಡು ತಿಮ್ಮಪ್ಪ ರಂಗಮಂದಿರಕ್ಕೆ ತರಲಾಗುತ್ತಿದ್ದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ರಾಜಕೀಯದ ಜತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಕಾಗೋಡು ಅಣ್ಣಪ್ಪ ಅವರು ಜಾನಪದ, ಯಕ್ಷಗಾನ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ , ಹಂಪಿ ಕನ್ನಡ ವಿವಿ ಸೆನೆಟ್, ನವದೆಹಲಿಯ ಅಖಿಲ ಭಾರತ ಕರಕುಶಲ ಅಭಿವೃದ್ದಿ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

1979ರಲ್ಲಿ ಕಾಗೋಡು ರಂಗಮಂಚ ಸಂಸ್ಥೆಯನ್ನು ಸ್ಥಾಪಿಸಿ ಹಲವು ನಾಟಕಗಳ ಅಭಿನಯ, ಸಂಘಟನೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ವತಃ ಡೊಳ್ಳು ಕುಣಿತದ ಕಲಾವಿದರಾಗಿದ್ದ ಅವರು ವಿದೇಶಗಳಿಗೂ ಡೊಳ್ಳು ತಂಡವನ್ನು ಕರೆದೊಯ್ದಿದ್ದರು.

2004ನೇ ಸಾಲಿನಲ್ಲಿ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ರಂಗಮಂದಿರವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 2007-08ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಸುವರ್ಣ ಕರ್ನಾಟಕ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !