ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಎಸ್ಪಿ ಇಶಾ ಪಂತ್ ಮನೆಯಲ್ಲಿ ಭಾರಿ ಗಾತ್ರದ ಎರಡು ಹಾವು ಪತ್ತೆ

Last Updated 8 ಮೇ 2022, 5:19 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಪೊಲೀಸ್ ಭವನದ ಬಳಿ ಇರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರ ಸರ್ಕಾರಿ ನಿವಾಸದಲ್ಲಿ ಬೆಳಗಿನ ವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಅಚ್ಚರಿ ‌ಕಾದಿತ್ತು.

ಸುಮಾರು ಏಳು ಅಡಿ ಗಾತ್ರದ ವಿಷಕಾರಿಯಲ್ಲದ ಕೆರೆಹಾವುಗಳು (ಇಂಡಿಯನ್ ರ್ಯಾಟ್ ಸ್ನೇಕ್) ಪತ್ತೆಯಾಗಿವೆ.

ಮನೆಯ ಈಜುಕೊಳದ ಪಕ್ಕದ ಕೊಠಡಿಯಲ್ಲಿ‌ದ್ದ ಹಾವುಗಳನ್ನು ಕಂಡ ಎಸ್ಪಿ ಅವರು ಸಿಬ್ಬಂದಿ ‌ಮೂಲಕ ಉರಗ ರಕ್ಷಕ ಪ್ರಶಾಂತ ಪಾಟೀಲ ಅವರಿಗೆ ಕರೆ ಮಾಡಿಸಿದ್ದಾರೆ.

ತಕ್ಷಣ ಬಂದ ಪ್ರಶಾಂತ ಹಾವುಗಳನ್ನು ಹಿಡಿದರು. ವಿಷಕಾರಿಯಲ್ಲವೆಂದು ತಿಳಿದ ಎಸ್ಪಿ ಇಶಾ ಹಾವುಗಳನ್ನು ಹಿಡಿದು‌ ಖುಷಿಪಟ್ಟರು.

ನಂತರ ಅವುಗಳನ್ನು ಪ್ರಶಾಂತ ಪಾಟೀಲ ಊರ ಹೊರಭಾಗದಲ್ಲಿ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT