ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 2.41 ಲಕ್ಷ ಹಳೆ ಪಿಂಚಣಿ ನೌಕರರು: ಮುಖ್ಯಮಂತ್ರಿ ಸಿದ್ದರಾಮಯ್ಯ

Published 18 ಫೆಬ್ರುವರಿ 2024, 16:14 IST
Last Updated 18 ಫೆಬ್ರುವರಿ 2024, 16:14 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯದಲ್ಲಿ ಒಟ್ಟು 5.09 ಲಕ್ಷ ಸರ್ಕಾರಿ ನೌಕರರಿದ್ದು, 2.41 ಲಕ್ಷ ನೌಕರರು ಹಳೆ ಪಿಂಚಣಿ (ಒಪಿಎಸ್) ಹಾಗೂ 2.68 ಲಕ್ಷ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಒಳಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಸುನಿಲ್ ವಲ್ಯಾಪುರೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎನ್‌ಪಿಎಸ್‌ ಯೋಜನೆಯಡಿ ನಿವೃತ್ತಿ ಹೊಂದಿ ಎಸ್‌ಎಸ್‌ಡಿಎಲ್‌– ಸಿಆರ್‌ಎದಿಂದ ಪ್ರಾನ್‌ (ಪಿಂಚಣಿ ಕಾಯಂ ಖಾತೆ ಸಂಖ್ಯೆ) ಖಾತೆಯಲ್ಲಿ ಇತ್ಯರ್ಥವಾದ ನೌಕರರು 1,686 ಇದ್ದಾರೆ. ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತದಲ್ಲಿ ಶೇ 60ರಷ್ಟು ಅನುಪಾತದಲ್ಲಿ ನೌಕರರಿಗೆ ಇತ್ಯರ್ಥಪಡಿಸಿ, ಶೇ 40ರಷ್ಟು ಮೊತ್ತ ಸಂಬಂಧಿಸಿದ ನಿವೃತ್ತರ ಎಎಸ್‌ಪಿಯಲ್ಲಿ ಹೂಡಿಕೆ ಮಾಡಿ, ಮಾಸಿಕ ಪಿಂಚಣಿ ಪಡೆಯಬೇಕಿದೆ ಎಂದು ಹೇಳಿದ್ದಾರೆ.

7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ವೇತನ ಪರಿಷ್ಕರಣೆ ಕುರಿತು ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳೊಂದಿಗೆ ಆಯೋಗ ಸಮಾಲೋಚನೆ ನಡೆಸುತ್ತಿದ್ದು, ಆಯೋಗದ ಕಾಲಾವಧಿಯನ್ನು ಮಾರ್ಚ್ 15ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದರು.

ಸುನಿಲ್ ವಲ್ಯಾಪುರೆ

ಸುನಿಲ್ ವಲ್ಯಾಪುರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT