ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | ಬಸವಣ್ಣ ದೇವರ ರಥೋತ್ಸವ ಮೇ 9ರಂದು

ಲೋಕಸಭಾ ಚುನಾವಣೆ ಪ್ರಯುಕ್ತ ಎರಡು ದಿನ ಮುಂದಕ್ಕೆ
Published 17 ಏಪ್ರಿಲ್ 2024, 15:13 IST
Last Updated 17 ಏಪ್ರಿಲ್ 2024, 15:13 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಐನೋಳ್ಳಿಯ ಬಸವಣ್ಣ ದೇವರ 284ನೇ ಜಾತ್ರಾ ಮಹೋತ್ಸವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 2 ದಿನಗಳ ಕಾಲ ಮಂದೂಡಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪುಣ್ಯಶೆಟ್ಟಿ ತಿಳಿಸಿದ್ದಾರೆ.

ಗ್ರಾಮದ ರಾಮಲಿಂಗೇಶ್ವರ ದೇವಾಲಯದಲ್ಲಿ ಭಕ್ತರ ಸಭೆ ನಡೆಸಿ ಚರ್ಚಿಸಿದ ಬಳಿಕ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ವಾಡಿಕೆಯಂತೆ ಮೇ 6ಮತ್ತು 7 ನಡೆಯಬೇಕಿದ್ದ ಜಾತ್ರಾ ಮಹೋತ್ಸವ 8 ಮತ್ತು 9ರಂದು ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

ಏ.26ರಿಂದ ಪ್ರತಿದಿನ ಪಲ್ಲಕ್ಕಿ ಉತ್ಸವ, ಮೇ 8ರಂದು ಅಗ್ನಿ ಪೂಜೆ ನೈವೇದ್ಯ ಸಮರ್ಪಣೆ ಹಾಗೂ 9ರಂದು ಬೆಳಿಗ್ಗೆ 8 ಗಂಟೆಗೆ ಅಗ್ನಿ ಪ್ರವೇಶ, ಸಂಜೆ 5ಗಂಟೆಗೆ ರಥೋತ್ಸವ ನಡೆಯಲಿದೆ’ ಎಂದು ಹೇಳಿದರು.

ಉಪಾಧ್ಯಕ್ಷ ದಿನೇಶ ದುಗ್ಗಾಣಿ, ಕಾರ್ಯದರ್ಶಿ ಜಗನ್ನಾಥ ಪುಣ್ಯಶೆಟ್ಟಿ, ಪ್ರಮುಖರಾದ ಶರಣು ಪಪ್ಪಾ, ಜಗನ್ನಾಥ ಲೊಡ್ಡಾ, ನಾಗಶೆಟ್ಟಿ ನಿಂಬೂರ, ಬಕ್ಕಪ್ಪ ಗೌನಳ್ಳಿ, ಮಲ್ಲಪ್ಪ ಜಾಡರ್, ನೀಲಕಂಠಪ್ಪ ಚಟ್ನಳ್ಳಿ, ಗುಂಡಪ್ಪ ಕಾಮಣಿ, ರಾಮಚಂದ್ರ ಪೂಜಾರಿ, ಧರ್ಮರಾಜ ಗೌಡನಹಳ್ಳಿ, ಸುಧಾಕರ ಮುರುಡಾ, ದೇವಾಲಯ ಪೂಜಾರಿ ಮಲ್ಲಯ್ಯ ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT