ಪೊಲೀಸರಿಂದ ಮುಂದುವರಿದ ಶೋಧ: 30 ಕೆ.ಜಿ ಗಾಂಜಾ ಜಪ್ತಿ

ಚಿಂಚೋಳಿ: ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಸಂಗಾಪುರದಲ್ಲಿ ತೊಗರಿ ಹೊಲದಲ್ಲಿ ಗಾಂಜಾ ಬೇಸಾಯ ಮಾಡುತ್ತಿರುವುದು ಕುಂಚಾವರಂ ಠಾಣೆಯ ಸಬ್ ಇನಸ್ಪೆಕ್ಟರ್ ಉಪೇಂದ್ರಕುಮಾರ ನೇತೃತ್ವದ ಪೊಲೀಸರ ತಂಡ ಸೋಮವಾರ ಪತ್ತೆ ಹಚ್ಚಿದೆ.
ಪ್ರಕರಣ ಸಂಬಂಧ ಸಂಗಾಪುರದ ಸರ್ವೆ ನಂ–6ರ ತೊಗರಿ ಹೊಲದಲ್ಲಿ ಬೆಳೆದಿದ್ದ ₹1.20 ಲಕ್ಷ ಮೊತ್ತದ 30 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡು ಆರೋಪಿ ಚಂದರ್ ಭಿಕ್ಕು ಪವಾರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿಯಲ್ಲಿ ಸಬ್ ಇನಸ್ಪೆಕ್ಟರ್ ಅವರಿಗೆ ರಾಜಶೇಖರ, ತಿಪ್ಪಣ್ಣ, ಹುಲಿಯಪ್ಪ ಮತ್ತು ರಾಹುಲ್ ಹಾಗೂ ಸಿಬ್ಬಂದಿ ನೆರವಾಗಿದ್ದಾರೆ. ಇದು ಸಂಗಾಪುರದಲ್ಲಿ ಪತ್ತೆಯಾದ 2ನೇ ಪ್ರಕರಣವಾಗಿದ್ದು, ಕುಂಚಾವರಂ ಪೊಲೀಸರು ಈ ಹಿಂದೆ ಸಂಗಾಪುರದಲ್ಲಿ ಒಂದು ಮತ್ತು ಲಿಂಗಾನಗರ ತಾಂಡಾದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.