ಸೋಮವಾರ, ಮಾರ್ಚ್ 27, 2023
31 °C

ಕಲಬುರಗಿ: ಛತ್ತೀಸಗಡದ ಇಂದಿರಾ ಕಲಾ ಸಂಗೀತ ವಿವಿಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ 36ನೇ ಅಂತರ ವಿಶ್ವವಿದ್ಯಾಲಯ ದಕ್ಷಿಣ ಪೂರ್ವ ವಲಯ ಯುವಜನೋತ್ಸವದಲ್ಲಿ ಛತ್ತೀಸಗಡದ ಇಂದಿರಾ ಕಲಾ ಸಂಗೀತ ವಿಶ್ವವಿದ್ಯಾಲಯ ಸಮಗ್ರ ಪ್ರಶಸ್ತಿ ಗಳಿಸಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ದ್ವಿತೀಯ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ತೃತೀಯ ಸ್ಥಾನ ಪಡೆದಿದೆ.

ಸಂಗೀತ, ನೃತ್ಯ, ಸಾಹಿತ್ಯ, ನಾಟಕ ಮತ್ತು ಪ್ರದರ್ಶನ ಕಲೆ ಸೇರಿ 27 ಸ್ಪರ್ಧೆಗಳು ಐದು ದಿನ ಜರುಗಿದವು. ಕರ್ನಾಟಕ, ತೆಲಂಗಾಣ ಮತ್ತು ಛತ್ತೀಸಗಡ ರಾಜ್ಯದ 1,029 ವಿದ್ಯಾರ್ಥಿಗಳು ಭಾಗವಹಿಸಿದರು. ಅವರಲ್ಲಿ 81ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೆಬ್ರುವರಿ 24ರಂದು ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಆಯ್ಕೆಯಾದರು.

ಸಮಗ್ರ ಪ್ರಶಸ್ತಿ: ಇಂದಿರಾ ಕಲಾ ಸಂಗೀತ ವಿಶ್ವವಿದ್ಯಾಲಯ– ಸಂಗೀತ, ನೃತ್ಯ ಮತ್ತು ಪ್ರದರ್ಶನ ಕಲೆ (ಪ್ರಥಮ). ಬೆಂಗಳೂರು ಉತ್ತರ ವಿಶ್ವವಿದ್ಯಾಲಯ– ಸಂಗೀತ(ದ್ವೀತಿಯ), ನಾಟಕ(ದ್ವಿತೀಯ), ಸಾಹಿತ್ಯ(ತೃತೀಯ) ಮತ್ತು ಪ್ರದರ್ಶನ ಕಲೆ (ತೃತೀಯ). ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ–ನೃತ್ಯ, ನಾಟಕ (ಪ್ರಥಮ), ಸಾಹಿತ್ಯ(ತೃತೀಯ).

ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ– ನಾಟಕ (ದ್ವಿತೀಯ), ಪ್ರದರ್ಶನ ಕಲೆ(ತೃತೀಯ). ಗುಲಬರ್ಗಾ ವಿಶ್ವವಿದ್ಯಾಲಯ– ಸಾಹಿತ್ಯ(ಪ್ರಥಮ), ಪ್ರದರ್ಶನ ಕಲೆ(ತೃತೀಯ). ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಸಂಗೀತ ಮತ್ತು ನಾಟಕದಲ್ಲಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ.

ಮಂಗಳೂರು ವಿಶ್ವವಿದ್ಯಾಲಯ– ನೃತ್ಯ(ತೃತೀಯ), ನಾಟಕ(ದ್ವಿತೀಯ). ಕರ್ನಾಟಕ ವಿಶ್ವವಿದ್ಯಾಲಯ– ಸಾಹಿತ್ಯ(ದ್ವಿತೀಯ). ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ– ನಾಟಕ(ಪ್ರಥಮ). ಕಲಬುರಗಿಯ ಸತ್ಯಸಾಯಿ ವಿಶ್ವವಿದ್ಯಾಲಯ– ಸಂಗೀತ(ತೃತೀಯ) ಸ್ಥಾನ ಪಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು