ಪ್ರಜಾವಾಣಿ ಜತೆಗೆ ಮಾತನಾಡಿದ ಅವರು,‘ಮನೆಯ ಗೋಡೆಗಳು ಅಲ್ಲಲ್ಲಿ ಉರುಳಿದ್ದು, ಸಂತ್ರಸ್ತರು ಅರ್ಜಿ ಸಲ್ಲಿಸಿದ್ದಾರೆ. ಅವರ ಮನೆಯ ಹಾನಿ ಕುರಿತು ಪ್ರಾಥಮಿಕ ಅಂದಾಜಿಸಿ ಪರಿಹಾರ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಜೂನ್‌ನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾದರೆ, ಜುಲೈ ತಿಂಗಳಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ತಾಲ್ಲೂಕಿನಲ್ಲಿ ಹಳೆಯದಾದ ಮಣ್ಣಿನಿಂದ ಕಟ್ಟಿದ ಮನೆಯ ಗೋಡೆಗಳು ಉರುಳಿದ್ದು ಈ ಕುರಿತು ಆಧಿನ ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ’ ಎಂದರು.