ಶುಕ್ರವಾರ, ಏಪ್ರಿಲ್ 16, 2021
31 °C
ಲಾರ್‌ ಟೈರ್‌ ಸಿಡಿದು ಸಂಭವಿಸಿದ ಅವಘಡ, ತಪ್ಪಿದ ಭಾರಿ ಅನಾಹುತ

ಬಸ್ಸಿಗೆ ಡಿಕ್ಕಿ ಹೊಡೆದ ಲಾರಿ: 7 ಜನರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೇವೂರ್‌ (ಕಲಬುರ್ಗಿ): ವಾಡಿ ಸಮೀಪದ ರೇವೂರ್‌ ಗ್ರಾಮದ ಬಳಿ ಗುರುವಾರ ಸಾರಿಗೆ ಸಂಸ್ಥೆಯ ಬಸ್‌ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬಸ್‌ ಚಾಲಕ ಹಾಗೂ ನಿರ್ವಾಹಕ ಸೇರಿ ಏಳು ಪ್ರಯಾಣಿಕರು ಗಾಯಗೊಂಡಿದ್ದಾರೆ.‌

ಸಾರಿಗೆ ಸಂಸ್ಥೆಯ ಬಸ್‌ ಜೇವರ್ಗಿಯಿಂದ ಚಿತ್ತಾಪುರ ಕಡೆಗೆ ಹೊರಟ್ಟಿತ್ತು. ಈ ವೇಳೆ ಎದುರುಗಡೆಯಿಂದ ಪರಸಿ ಕಲ್ಲುಗಳನ್ನು ತುಂಬಿಕೊಂಡ ಲಾರಿಯ ಟೈರ್‌ ಏಕಾಏಕಿ ಸಿಡಿಯಿತು. ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‌ ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಮುಂದಿನ ಸೀಟ್‌ನಲ್ಲಿದ್ದ ಬಸ್‌ ನಿರ್ವಾಹಕ, ಚಾಲಕ ಹಾಗೂ ಐವರು ಪ್ರಯಾಣಿಕರಿಗೆ ಹೆಚ್ಚು ಗಾಯಗಲಾಗಿದ್ದು, ಉಳಿದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಲಾರಿ ಗುದ್ದಿದ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು