ಸೇಡಂ: ತಾಲ್ಲೂಕಿನ ಸಂಗಾವಿ (ಎಂ) ನಾಲಾ ನೀರಿನಲ್ಲಿ ಶನಿವಾರ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ನೀರಿನ ರಭಸದಲ್ಲಿ ಕೊಚ್ಚಿ ಹೋಗಿದ್ದಾರೆ.
ಕುರಕುಂಟಾ ಗ್ರಾಮದ ಅಮೆರಿಕ ಬಡಾವಣೆ ನಿವಾಸಿ ರಾಜು ನರಸಪ್ಪ ನಾಮವಾರ (38) ಕೊಚ್ಚಿ ಹೋದವರು. ಪತ್ನಿ ಸೇರಿ ಒಬ್ಬರು ಪುತ್ರ ಹಾಗೂ ಒಬ್ಬರು ಪುತ್ರಿಯರು ಇದ್ದಾರೆ.
ಕೊಚ್ಚಿ ಹೋದ ವ್ಯಕ್ತಿಯ ಶೋಧನೆಗಾಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಕುರಕುಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.