ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿವಿಪಿ ನಾಯಕತ್ವ ಕ್ಷಮತೆ ಶಿಬಿರ

Last Updated 15 ಫೆಬ್ರುವರಿ 2021, 4:32 IST
ಅಕ್ಷರ ಗಾತ್ರ

ಕಲಬುರ್ಗಿ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಹಾನಗರ ಶಾಖೆ ವತಿಯಿಂದ ನಗರದಲ್ಲಿ ಶನಿವಾರ ವಿದ್ಯಾರ್ಥಿ ನಾಯಕರ ಕ್ಷಮತೆ ಹೆಚ್ಚಿಸಲು ಒಂದು ದಿನದ ತರಬೇತಿ ಶಿಬಿರ ನಡೆಯಿತು.

ಸ್ವಾಮಿ ವಿವೇಕಾನಂದರು ಹಾಗೂ ಶಾರದೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದ ಜಿಲ್ಲೆಯ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಅಜಯಕುಮಾರ ಅವರು, ‘ಯುವಜನರು ದೇಶದ ಅತಿದೊಡ್ಡ ಸಂಪತ್ತಾಗಿದ್ದು, ದುಶ್ಟಚಟಗಳಿಗೆ ಒಳಗಾಗಬಾರದು. ಸನ್ಮಾರ್ಗದಲ್ಲಿ ನಡೆದು ನಿರ್ದಿಷ್ಟ ಗುರಿ ತಲುಪಬೇಕು’ ಎಂದರು.‌

ಎಬಿವಿಪಿ ಕಲಬುರ್ಗಿ ಕೋಶದ ಪ್ರಮುಖ ಸೂರ್ಯಕಾಂತ ರಾಕಲೆ ಮಾತನಾಡಿ, ‘ಎಬಿವಿಪಿ ಸಂಘಟನೆಯು ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿ ಇಟ್ಟುಕೊಂಡು ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರಪುನರ್‌ ನಿರ್ಮಾಣದ ಸಂಕಲ್ಪ ತೊಟ್ಟಿದೆ’ ಎಂದರು.

ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿ, ‘ನಮ್ಮ ಸಂಘಟನೆಯು ಜಗತ್ತಿನಲ್ಲಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದು. ಕಾಲೇಜು ಕ್ಯಾಂಪಸ್‌ಗಳನ್ನು ತನ್ನ ಕೇಂದ್ರವಾಗಿಟ್ಟು ಕೊಂಡು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ’ ಎಂದರು.

ವಿಭಾಗೀಯ ಸಂಘಟನಾ ಕಾರ್ಯದರ್ಶಿ ಧನಂಜಯ, ಹಿರಿಯ ಕಾರ್ಯಕರ್ತ ಭೀಮರಾಯ ಇಟಗೊಂಡ ಮಾತನಾಡಿದರು. ಎಬಿವಿಪಿ ಜಿಲ್ಲಾ ಪ್ರಮುಖರಾದ ಪ್ರಮೋದ ನಾಗುರಕರ್ ಮಾತನಾಡಿದರು.

ಇದೇ ವೇಳೆ ಮಾಹಾನಗರ ಘಟಕದ 2021ನೇ ಸಾಲಿನ ನೂತನ ಕಾರ್ಯಕಾರಣಿ ಘೊಷಣೆ ಮಾಡಲಾಯಿತು. ಉಪನ್ಯಾಸಕ ಬಸವಂತಗೌಡ ಪಾಟೀಲ (ಮಹಾನಗರ ಘಟಕದ ಅಧ್ಯಕ್ಷ), ಶಂಕರ ಬಾಳಿ, ಪ್ರೊ.ವಿಜಯಲಕ್ಷ್ಮಿ (ಉಪಾಧ್ಯಕ್ಷರು), ಡಾ.ಬುರ್ಲಿ (ಪ್ರಮುಖ), ತೋಟಪ್ಪ ದೇಸಾಯಿ (ಪ್ರಮುಖ), ಮಂಜುನಾಥ, ದೀಪು ಹಬಿಶಾಲ್ (ಸಹ ಕಾರ್ಯದರ್ಶಿಗಳು), ಶಿವಕುಮಾರ ಹರನೂರ್ (ಕಾರ್ಯಾಲಯ ಕಾರ್ಯದರ್ಶಿ), ವೀರೇಶ ಕತ್ತಿ (ಸಹ ಕಾರ್ಯಾಲಯ ಕಾರ್ಯದರ್ಶಿ), ಪರಮಾನಂದ (ತಾಲ್ಲೂಕು ಸಂಚಾಲಕ), ಶರಣು ಹುಗಾರ (ಅಧ್ಯಯನ ಕೇಂದ್ರ ಪ್ರಮುಖ), ಸೀಮಾ ಪಾಟೀಲ (ವಿದ್ಯಾರ್ಥಿನಿ ಪ್ರಮುಖರು), ಮಂಜು ಕಟ್ಟಿಮನಿ (ಕೇಂದ್ರೀಯ ವಿಶ್ವವಿದ್ಯಾಲಯ ಪ್ರಮುಖ), ಕಿರಣ ಬೀರಾದರ (ವಿಟಿಯು ಪ್ರಮುಖ), ದಶರಥ ರಾಠೋಡ (ಸಹ ಪ್ರಮುಖ), ರವಿ ದೊಡಮನಿ (ಹಾಸ್ಟೆಲ್ ಪ್ರಮುಖ), ಲೋಕೇಶ (ಎಸ್.ಎಫ್‌.ಡಿ ಪ್ರಮುಖ), ನಿಂಗರಾಜ ಅರಳಗುಂಡಗಿ (ಮಾಧ್ಯಮ ಸಂಪರ್ಕ ಪ್ರಮುಖ), ಕಿರಣ, ಪ್ರಕಾಶ ಪೂಜಾರಿ (ಕಾರ್ಯಕಾರಣಿ ಸದಸ್ಯರು) ಅವರನ್ನು ಆಯ್ಕೆ ಮಾಡಲಾಯಿತು.

ಎಬಿವಿಪಿ ಜಿಲ್ಲಾ ಸಂಚಾಲಕ ಓಂಕಾರ ಪಾರೇಶ್ ನಿರೂಪಿಸಿದರು. ಜಿಲ್ಲಾ ಎಸ್.ಎಫ್‌.ಡಿ ಪ್ರಮುಖ ಅಭಿಷೇಕ ಬಾಳೆ ಸ್ವಾಗತಿಸಿದರು. ನಿತೀಶ್ ವಂದಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT