ಬುಧವಾರ, ಸೆಪ್ಟೆಂಬರ್ 18, 2019
25 °C

ಡಿಕ್ಕಿ ತಪ್ಪಿಸಲು ಹೋಗಿ ಎರಡು ಬಸ್‌ಗಳು ಪಲ್ಟಿ

Published:
Updated:

ಕಲಬುರ್ಗಿ: ಎದುರಿಗೆ ಬರುತ್ತಿದ್ದ ವಾಹನ ಡಿಕ್ಕಿ ಆಗುವುದನ್ನು ತಪ್ಪಿಸಲು ಯತ್ನಿಸಿದ ವಿಆರ್‌ಎಲ್ ಸಂಸ್ಥೆಯ ಬಸ್ ಹಾಗೂ ಆರೇಂಜ್ ಸಂಸ್ಥೆಯ ಬಸ್‌ಗಳು ತಾಲ್ಲೂಕಿನ ನದಿಸಿಣ್ಣೂರ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಪಲ್ಟಿಯಾಗಿವೆ.

ಭಾನುವಾರ ಬೆಳಿಗ್ಗೆ 7.30ಕ್ಕೆ ನಡೆದ ಘಟನೆಯಲ್ಲಿ ವಿಆರ್‌ಎಲ್ ಬಸ್‌ನಲ್ಲಿದ್ದ 31 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಜಿಲ್ಲಾಸ್ಪತ್ರೆ ಹಾಗೂ ಇಎಸ್ಐ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಬಸ್ ಬೆಂಗಳೂರಿನಿಂದ ಬೀದರ್‌ನತ್ತ ತೆರಳುತ್ತಿತ್ತು. ಆರೇಂಜ್ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)